ಜಿಲ್ಲಾ ಮಾಧ್ಯಮ ರತ್ನ ಪ್ರಶಸ್ತಿಗೆ ಮಾರುತಿ ಹಿಪ್ಪರಗಿ ಆಯ್ಕೆ
ಮುದ್ದೇಬಿಹಾಳ: ಕರ್ನಾಟಕ ಕಾರ್ಯನಿರತರ ಪತ್ರಕರ್ತರ ದ್ವನಿ ಸಂಘಟನೆಯಿಂದ ವಾರ್ಷಿಕವಾಗಿ ನೀಡುವ ಜಿಲ್ಲಾ ಮಟ್ಟದ ಮಾದ್ಯಮ ರತ್ನ ಪ್ರಶಸ್ತಿಗೆ ತಾಲೂಕಿನ ಹಿರಿಯ ಪತ್ರಕರ್ತ, ಬರಹಗಾರ ಮಾರುತಿ ಹಿಪ್ಪರಗಿ ಆಯ್ಕೆಯಾಗಿದ್ದಾರೆ.
ಪತ್ರಿಕೋಧ್ಯಮದಲ್ಲಿ ತಮ್ಮದೆ ಛಾಪೂ ಮೂಡಿಸಿರುವ ಹಿರಿಯ ಪತ್ರಕರ್ತ ಮಾರುತಿ ಹಿಪ್ಪರಗಿಯವರು ರಾಜ್ಯಮಟ್ಟದ ಅನೇಕ ದಿನ ಪತ್ರಿಕೆ ಹಾಗೂ ವಾರ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಅವರು ಪತ್ರಿಕೋದ್ಯಮದಲ್ಲಿ ನಿರ್ಭಿತಿಯಿಂದ ಸಮಾಜಮುಖಿ ವರದಿ ಮಾಡುವದರಲ್ಲಿ ಮುಂಚೂನಿಯಲ್ಲಿರುವ ಪತ್ರಕರ್ತರಾಗಿದ್ದಾರೆ. ಲಡಾಯಿ, ಸಂಯುಕ್ತ ಕರ್ನಾಟಕ, ಕರ್ನಾಟಕ ಸಂದ್ಯಾಕಾಲ ಪತ್ರಿಕೆಗಳಲ್ಲಿ ವರದಿ ಮಾಡಿರುವ ಮಾರುತಿ ಹಿಪ್ಪರಗಿಯವರು ವ್ಯವಸ್ಥೆಯ ವಿರುದ್ದ ಸದಾ ದ್ವನಿ ಎತ್ತುವಲ್ಲಿ ಮುಂಚೂನಿ ಪತ್ರಕರ್ತರಾಗಿದ್ದಾರೆ.
ಬರವಣಿಗೆಯ ಜೋತೆಗೆ ಮುದ್ದೇಬಿಹಾಳ ತಾಲೂಕಿನ ಕೆಲವು ಜ್ವಲಂತ ಸಮಸ್ಯೆಗಳಿಗೆ ಪ್ರತಿಭಟನೆ, ಹೋರಾಟ ಮಾಡುತ್ತಾ ಹೋರಾಟಗಾರರಾಗಿಯು ತಮ್ಮನ್ನು ತೋಡಗಿಸಿಕೋಂಡಿರುವ ಮಾರುತಿ ಹಿಪ್ಪರಗಿಯವರು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾಗಿ ಅನೇಕ ಹೋರಾಟಗಳನ್ನು ಕೂಡ ಮಾಡಿದ್ದಾರೆ. ಇವರ ಬರವಣಿಗೆಯನ್ನು ಗುರುತಿಸಿ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ವತಿಯಿಂದ ಜುಲೈ ೨೭ ರಂದು ವಿಜಯಪುರದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,