ವಿಜಯಪುರ: ಕಾಂಗ್ರೆಸ್ ಕಛೇರಿಯಲ್ಲಿ ಹುತಾತ್ಮರ ದಿನ
ಮಹಾತ್ಮ ಗಾಂಧಿಜಿಯವರ ಕೊಡುಗೆ ಯಾರೂ ಮರೆಯುವಂತಿಲ್ಲ ..!
ವಿಜಯಪುರ: ಅಹಿಂಸಾಮೂರ್ತಿ, ಸರಳತೆಯ ಪ್ರತಿಪಾದಕ, ಜಗತ್ತಿನ ಹಲವಾರು ಮಹಾನ್ ಚಳುವಳಿಗಳಿಗೆ ಪ್ರೇರಕರಾಗಿದ್ದ ಮಹಾತ್ಮಾ ಗಾಂಧಿಯವರ ಕೊಡುಗೆಗಳನ್ನು ಯಾರೂ ಮರೆಯುವಂತಿಲ್ಲ. ಸತ್ಯ, ಶಾಂತಿ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆಗಾಗಿ ಗಾಂಧಿಜಿಯವರು ಪಾಲಿಸಿದ ತತ್ವಗಳು ನಾವೆಲ್ಲರೂ ಸದಾ ಸ್ಮರಿಸುವಂತಾಗಬೇಕೆಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ ಹೇಳಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 76ನೇ ಪುಣ್ಯತಿಥಿಯ ಅಂಗವಾಗಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಹುತಾತ್ಮರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ. ಡಾ.ಗಂಗಾಧರ ಸಂಬಟ್ಟೆ, ಬ್ಲಾಕ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಅಶ್ಚಾಕ ಮನಗೂಳಿ, ಎಸ್‌ಟಿ ಘಟಕದ ಅಧ್ಯಕ್ಷರಾದ ದೇವಾನಂದ ಲಚ್ಯಾಣ, ಅಬ್ದುಲ್ ಪೀರಾ ಜಮಖಂಡಿ, ಫಿರೋಜ ಶೇಖ, ಅನಸೂಯಾ ನಿಂಬರಗಿ, ಆಸ್ಮಾ ಕಾಲೇಬಾಗ, ಶಮಿಮಾ ಅಕ್ಕಲಕೋಟ, ರುಬಿನಾ ಹಳ್ಳೂರ, ಕಾಶಿಬಾಯಿ ಹಡಪದ, ಗಂಗಾಬಾಯಿ ಕಣಮುಚನಾಳ, ಅಬುಬಕರ ಕಂಬಾಗಿ, ಕೃಷ್ಣಾ ಲಮಾಣಿ, ತಾಜುದ್ದೀನ ಖಲೀಫಾ, ಪರಶುರಾಮ ಹೊಸಮನಿ, ಮಂಜುನಾಥ ನಿಡೋಣಿ, ಜಾಫರ ಸುತಾರ, ಮಹೇಶ ಶಹಾಪೂರ, ವರ್ಷಾ ಭೋವಿ, ಹಮಿದಾ ಪಟೇಲ, ಮುಂತಾದವರು ಉಪಸ್ಥಿತ- ರಿದ್ದರು.