ರಾಯಚೂರು -ಮಾರ್ಚ್ ನಲ್ಲಿ ನಡೆಯಲಿರುವ ೨೦೨೨-೨೩ನೇ ಸಾಲಿನ ಬಜೆಟ್ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿರಲಿ ಎಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದರು.
ದೇಶದಲ್ಲಿಯೇ ಕಡಿಮೆ ಸಂಬಳ ಪಡೆಯುತ್ತಿರುವ ನೌಕರರು ನಮ್ಮ ರಾಜ್ಯ ಸರ್ಕಾರಿ ನೌಕರರು ನಮ್ಮ ರಾಜ್ಯ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ದೇಶದಲ್ಲಿಯೇ ೩ನೇ ಸ್ಥಾನ ಪಡೆದಿರುವುದು ತಮಗೆ ತಿಳಿದ ವಿಷಯವಾಗಿದೆ.
ರಾಜ್ಯದಲ್ಲಿ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ನಿಗದಿಪಡಿಸುವ ದಿಶೆಯಲ್ಲಿ ಹಿಂದಿನ ನಾಲ್ಕುನೆ ವೇತನ ಆಯೋಗ ಹಾಗೂ ೨ಅಧಿಕೃತ ವೇತನ ಸಮಿತಿಗಳು ಪ್ರತಿ ೫ ವರ್ಷಕ್ಕೊಮ್ಮೆ ರಚಿಸಿಕೊಂಡು ವೇತನವನ್ನು ಪರಿಷ್ಕರಿಸಿಕೊಂಡು ಬಂದಿದ್ದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳಲ್ಲಿ ಹೆಚ್ಚಿನ ನ್ಯೂನ್ಯತೆಗಳು ಉಂಟಾಗಿರಲಿಲ್ಲ.
ಕರ್ನಾಟಕ ರಾಜ್ಯ ನೌಕರರು ಕೇಂದ್ರ ನೌಕರರಿಗಿಂತ ಹೆಚ್ಚಿನ ವೇತನ ಪಡೆಯುವಂತಹ ಸಂದರ್ಭಗಳು ಕೂಡ ಇದ್ದವು.ಆದರೆ, ೧೯೯೮, ೨೦೦೭ ರ ವೇತನ ಪರಿಷ್ಕರಣೆಯಲ್ಲಿ ಹಿಂದಿನ ವೇತನ ಆಯೋಗಗಳು ವಿಳಂಬ ರಚನೆಯಿಂದಾಗಿ ಎರಡು ವೇತನ ಪರಿಷ್ಕರಣೆಗಳನ್ನು ಕೆಳೆದುಕೊಂಡಿದ್ದಾರೆ.
ಆದ್ದರಿಂದ, ಜುಲೈ ೨೦೧೭ ರಿಂದ ಜಾರಿಗೆ ಬಂದಿರುವ ೬ ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ಬಂದು ೫ ವರ್ಷಗಳಾಗುತ್ತಿರುವ ಹಿನ್ನಲೆಯಲ್ಲಿ, ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ವೇತನ ಆಯೋಗವನ್ನು ರಚಿಸಲು ಅನುವಾಗುವಂತೆ ೨೦೨೨-೨೩ನೇ ಸಾಲಿನ ಆಯವ್ಯವನ್ನು ಒದಗಿಸುವಂತೆ ಇನ್ನುಳಿದ ವಿವಿಧ ಬೇಡಿಕೆಗಳಾದ ಹಳೆಯ ಪಿಂಚಣಿಯೋಜನೆ ಮರುಸ್ಥಾಪಿಸುವ ನಿಟ್ಟಿನಲ್ಲಿ ಆಯವ್ಯಯದಲ್ಲಿ ಅವಕಾಶ ಕಲ್ಪಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿಹೇ ಭರ್ತಿ ಮಾಡಬೇಕೆಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿತು.
ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿಯಾದ ನಾರಾಯಣ, ತಾಯರಾಜ್ ಮರ್ಚೆಟಳ್, ಶಹಬುದ್ದೀನ, ಸುಧಾಕರ್, ಮಧುಕರ್,ಮೈನುದ್ದೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.