ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಂ ಆರ್ ಮಂಜುನಾಥ್
ಹನೂರು : 69ನೇ ವನ್ಯ ಜೀವಿ ಸಪ್ತಾಹ ಅಂಗವಾಗಿ ಮ್ಯಾರಥಾನ್ ಓಟ ವನ್ನು ಆಯೋಜನೆ ಮಾಡಲಾಗಿತ್ತು, ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ಶಾಸಕ ಎಂಆರ್ ಮಂಜುನಾಥ್ ಮ್ಯಾರಥಾನ್ ಗೆ ಚಾಲನೆ ನೀಡಿದರು.
ಮಂಗಲ ಗ್ರಾಮದ ಪ್ರೌಢ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದ ಮ್ಯಾರಥಾನ್ ಓಟ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನ ವಿಜಯ್ , ದ್ವಿತೀಯ ಬಹುಮಾನ ಸುರೇಶ್, ತೃತೀಯ ಬಹುಮಾನ ಮಲ್ಲ ಪಡೆದುಕೊಂಡಿದ್ದಾರೆ.
ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿ ಮುಂದಿನ ದಿನ ಗಳಲ್ಲಿ ಮೂರು ವಲಯಗಳಲ್ಲಿ ಸೇರಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಜನರಿಗೆ ಕಾಡನ್ನು ಸಂರಕ್ಷಣೆ ಮಾಡುವಂತೆ ಜಾಗೃತಿ ಮೂಡಿಸಿ,
ಕಾಡಂಚಿನ ಪ್ರದೇಶದ ಜನರಿಗೆ ಅರಿವು ಮೂಡಿಸಬೇಕು, ಕಾಡಂಚಿನ ಭಾಗದಲ್ಲಿ ಬಡ ರೈತರಿದ್ದಾರೆ, ವನ್ಯ ಜೀವಿ ಪ್ರಾಣಿಗಳಿಂದ ತಾವು ಬೆಳೆದ ಬೆಳೆ ಗಳನ್ನು ರಕ್ಷಣೆ ಮಾಡಲು ಹಂತ ಹಂತವಾಗಿ ರೈಲ್ವೆ ಬ್ಯಾರಿಕೆಡ್ ಸೇರಿದಂತೆ ಇನ್ನಿತರ ಯೋಜನೆಗಳನ್ನು ನಿರ್ಮಿಸಬೇಕು, ಅರಣ್ಯದ ಕುರಿತು ಮಕ್ಕಳಗೆ ಗಿಡ ಬೆಳಿಸುವ ಅಕಾಡೆಮಿ ಯನ್ನು ತೆರೆಯುವ ಆಲೋಚನೆಗಳಿವೆ, ಮುಂದಿನ ದಿನಗಳಲ್ಲಿ ಜಾರಿಗೆ ತರಬೇಕು. ಮಕ್ಕಳ ಭವಿಷ್ಯಕ್ಕಾಗಿ ನಾವು ಕಾಡನ್ನು ರಕ್ಷಣೆ ಮಾಡಬೇಕು ಅಸಮತೋಲನ, ಎಲ್ಲರೂ ಸೇರಿ ಚಾಲನೆ ನೀಡಬೇಕು, ಪರಿಸರ ಕಾಳಜಿ ಹೆಚ್ಚಾಗ ಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ವಲಯ ಅರಣ್ಯಧಿಕಾರಿ ಪ್ರಫುಲ್ಲ ಪಿ, ಕೊಳ್ಳೇಗಾಲ ವಲಯ ಅರಣ್ಯ ಅಧಿಕಾರಿ ವಾಸು, ಸಹಾಯಕ ವಲಯ ಅರಣ್ಯಧಿಕಾರಿ ಯಳಂದೂರು ಸುರೇಶ್ ಕೆ.ಮಂಗಲ ಶಾಲೆಯ ಮುಖ್ಯ ಶಿಕ್ಷಕ ಮಹೇಶ್, ವಲಯ ಅರಣ್ಯಧಿಕಾರಿ ಬೈಲೂರು ಪ್ರಮೋದ್, ಮಂಗಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೊರೆ, ಉಪ ವಲಯ ಅರಣ್ಯಧಿಕಾರಿ ಪ್ರಭುಸ್ವಾಮಿ, ಗಸ್ತು ಅರಣ್ಯ ಪಾಲಕ ರಾಜು, ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.