ಕ್ಷೇತ್ರದ ಜನರ ನಿರೀಕ್ಷಗೆ ತಕ್ಕಂತೆ ಅಭಿವೃದ್ಧಿ..! ಶಾಸಕ ಮಂಜುನಾಥ್
ಮಾರಮ್ಮನ ದೇವಾಲಯದ ನೂತನ ಕಟ್ಟಡಕ್ಕೆ ಭೂಮಿ ಪೂಜೆ..MLA Manjunath
ಹನೂರು: ತಾಲೂಕಿನ ದೊಮ್ಮನಗದ್ದೆ ಗ್ರಾಮದ ಸೇವಾಲಾಲ್ ಬಂಜಾರ ಟ್ರಸ್ಟ್ ನ ನೇತೃತ್ವದಲ್ಲಿ,ಮಾರಮ್ಮ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಎಂಆರ್ ಮಂಜುನಾಥ್ ರವರು ನೆರವೇರಿಸಿದರು.
ಮಾರಮ್ಮ ದೇವಸ್ಥಾನದ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂಆರ್ ಮಂಜುನಾಥ್ ನನ್ನನ್ನು ಗೆಲ್ಲಿಸಿದ ಮತದಾರ ಬಂಧುಗಳಿಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ, ದೊಮ್ಮನಗದ್ದೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಹಾಗೂ ವೈಯಕ್ತಿಕ ಧನ ಸಹಾಯ ನೀಡುವ ಮೂಲಕ ಒಂದು ಸುಂದರ ದೇವಸ್ಥಾನ ನಿರ್ಮಾಣ ಮಾಡಲು ನನ್ನ ಕೈಲಾದಷ್ಟು ನಾನು ಸಹಾಯ ಮಾಡುತ್ತೇನೆ .
ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಜ್ಜಿಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರುದ್ರ ನಾಯಕ್, ಸೇವಾಲಾಲ್ ಬಂಜಾರ ಟ್ರಸ್ಟ್ ನಪದಾಧಿಕಾರಿಗಳಾದ ಕಾಶಿ ನಾಯಕ್, ಕುಮಾರ್, ಗೋಪಾಲ್, ರಾಜೇಂದ್ರ, ಬಾಲ ನಾಯಕ್, ಜೆಡಿಎಸ್ ಮುಖಂಡರುಗಳಾದ ರಾಜುಗೌಡ, ಮಾದೇವ ನಾಯಕ್, ಪ್ರಸಾದ್, ಅತಿಕ್ ಅರ್ಚಕರಾದ ಸಂಪತ್ ಇನ್ನು ಮುಂತಾದವರು ಹಾಜರಿದ್ದರು.