ಇಂಡಿ: ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ನೆಲೆ ಎರಡೂ ಇದೆ. ಮನುಷ್ಯನ ಬಯಕೆಗಳು ಒಳ್ಳೆಯವಾಗಿದ್ದರೆ ಬದುಕು ಉಜ್ವಲವಾಗುತ್ತದೆ ಎಂದು ರಂಭಾಪೂರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶ್ರೀಗಳು ತಿಳಿಸಿದರು.
ಶುಕ್ರವಾರ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡುಗುಡಿಯ ಶ್ರೀ ಮರುಳಸಿದ್ದೇಶ್ವರ ಹಾಗೂ ನಂದಿಬಸವೇಶ್ವರ ನೂತನ ಮೂರ್ತಿಗಳಿಗೆ
ರುದ್ರಾಭಿಷೇಕ, ಪ್ರಾಣ ಪ್ರತಿಷ್ಟಾಪನೆ, ಹೋಮ, ಹವನಾದಿ
ಪೂಜಾ ಕೈಂಕರ್ಯಗಳು ಧರ್ಮಸಭೆ ಮತ್ತು
ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು
ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶ ಹಲವಾರು ಧರ್ಮಗಳು ಬೇರೆ ಬೇರೆ
ಆಚರಣೆಗಳು ಇವೆ. ಧರ್ಮಗಳು ಬೇರೆ ಬೇರೆಯಾದರೂ ಆಚರಣೆಗಳು ಬೇರೆಬೇರೆಯಾದರೂ ಎಲ್ಲ ಧರ್ಮಗಳ ಕೊನೆಯ ಗುರಿ ಅದು ಮಾನವ ಕಲ್ಯಾಣಕ್ಕಾಗಿವೆ. ವೀರಶೈವ ಧರ್ಮ ಮನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶ ನಾಡಿಗೆ ನೀಡಿದೆ ಎಂದರು. ತಡವಲಗಾ ಗ್ರಾಮದಲ್ಲಿ ಇಂತಹ ಭವ್ಯವಾದ ದೇವಾಲಯವನ್ನು ಕಟ್ಟಿಸಿ ಲೋಕಾರ್ಪಣೆ
ಕಾರ್ಯಕ್ರಮಕ್ಕೆ ನನ್ನನ್ನು ಕರೆಸಿದ್ದು ಸಂತಸ ತಂದಿದೆ,
ಮಹಿಳೆಯರಿಗೆ ಉಡಿ ತುಂಬುವ ಮೂಲಕ ನಮ್ಮ ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಉಡಿ ತುಂಬುವ ಮಹತ್ವದ ಬಗ್ಗೆ ಮಹಿಳೆಯರಿಗೆ ಅರಿವು ಹಾಗೂ ಜಾಗೃತಿ ಮೂಡಿಸುವುದು ಪುಣ್ಯದ ಕೆಲಸವಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಅಣ್ಣಪ್ಪ ಖೈನೂರ ಮಾತನಾಡಿದರು. ಹತ್ತಳ್ಳಿ ಶ್ರೀಗಳು, ನಾದ ಶ್ರೀಗಳು, ಬಾಗೇವಾಡಿ ಶ್ರೀಗಳು, ಹನುಮಾಪೂರ ಶ್ರೀಗಳು,
ಶ್ರೀಗಳು, ಹಾವಿನಾಳ ಶ್ರೀಗಳು, ಕೋಲಾರ ಪೂಜ್ಯರು
ಹಾಗೂ ಶಿವಾನಂದ ಶಾಸ್ತ್ರೀಗಳು ಸೇರಿದಂತೆ ಅನೇಕರು
ಆಶೀರ್ವಚನ ನೀಡಿದರು.
ನಾಗೇಶ ಹೇಗಡ್ಯಾಳ ಸಾರಥ್ಯದ ಸರ್ವಜ್ಞ ಕೆರಿಯರ್
ಅಕಾಡೆಮಿಯ ಮಾರ್ಗದರ್ಶನದಲ್ಲಿ ಇಂಡಿ ತಾಲ್ಲೂಕಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ಸ್ವರ್ಧಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಬಾಬುಸಾವುಕಾರ ಮೇತ್ರಿ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ಮಳಸಿದ್ದಪ್ಪ ಬ್ಯಾಳಿ, ಅನೀಲ ಏಳಗಿ, ಮಹಾದೇವಪ್ಪ ಪೂಜಾರಿ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಹೊಸಮನಿ, ತಮ್ಮಣ್ಣಾ ಪೂಜಾರಿ, ಅಶೋಕ ಮಿರ್ಜಿ, ರಾಜು ಧಡೇದ, ಶಶಿಧರ ಟೆಂಗಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಜೋಡುಗುಡಿಯ ಶ್ರೀ ಮರುಳಸಿದ್ದೇಶ್ವರ ಹಾಗೂ ನಂದಿಬಸವೇಶ್ವರ ನೂತನ ಮೂರ್ತಿಗಳಿಗೆ ರುದ್ರಾಭಿಷೇಕ, ಪ್ರಾಣ ಪತ್ರಿμÁ್ಠಪನೆ, ಹೋಮ, ಹವನಾದಿ ಪೂಜಾ
ಕೈಂಕರ್ಯಗಳು ಧರ್ಮಸಭೆ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು
ಉದ್ಘಾಟಿಸಿ ರಂಭಾಪೂರಿ ಪೀಠದ ಜಗದ್ಗುರು ಡಾ.
ವೀರಸೋಮೇಶ್ವರ ಮಾತನಾಡಿದರು.