ಮಲೆ ಮಹದೇಶ್ವರ ಬೆಟ್ಟ ಸಾಲೂರು ಬ್ರಾಹ್ಮಠದ ಗುರುಸ್ವಾಮಿಗಳು ಲಿಂಗೈಕ್ಯ
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು:ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟ ಕೋಟ್ಯಂತರ ಭಕ್ತರ ಆರಾಧ್ಯ ದೈವ ಸನ್ನಿಧಿಯ ಶಾಲೂರು ಬೃಹನ್ ಮಠದ ಪಟ್ಟದ ಗುರುಸ್ವಾಮಿಗಳು ನಿಧನರಾಗಿರುವುದು ತುಂಬಲಾರದ ನಷ್ಟ ಉಂಟಾಗಿದೆ ಶ್ರೀಗಳು ಸಾಲೂರು ಬ್ರಾಹ್ಮಠದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸ ಹಸಿದು ಬರುವ ಭಕ್ತಾದಿಗಳಿಗೆ ದಾಸೋಹ ಕಲ್ಪಿಸುವ ಮೂಲಕ ಶ್ರೀಕ್ಷೇತ್ರದ 77 ಮಲೆಗಳ ಇತಿಹಾಸ ಪ್ರಸಿದ್ಧ ಹೊಂದಿರುವ ಕಾರ್ಮಿಕ ಸ್ಥಳದ ಜನತೆಗೆ ದಾರಿದೀಪವಾಗಿದ್ದರು ಶ್ರೀಗಳು ನಮ್ಮ ತಾಲೂಕಿನ ಜಿಕೆ ಹೊಸೂರು ಗ್ರಾಮದಲ್ಲಿ ಜನಿಸಿ ಶ್ರೀಗಳ ಅಪಾರ ಸೇವೆ ಮಠಕ್ಕೆ ಸೇವೆ ಸಲ್ಲಿಸಿದ್ದಾರೆ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಭಕ್ತಾದಿಗಳು ಸಹ ಗುರುಸ್ವಾಮಿಗಳು ಹಿಂದೆ ಗುರುತಿಸುವ ಮೂಲಕ ಮಠಕ್ಕೆ ಮತ್ತು ತಾಲೂಕಿನ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ದಾರಿ ದೀಪವಾಗಿದ್ದ ಮಟ್ಟದ ಗುರುಸ್ವಾಮಿಗಳು ನಮ್ಮನ್ನ ಅಗಲಿ ಲಿಂಗೈಕ್ಯರಾಗಿರುವುದು ತುಂಬಲಾರದ ನಷ್ಟ ಉಂಟಾಗಿದೆ.
ವಿವಿಧ ಮಠಾಧೀಶರುಗಳು ಶಾಸಕರದ ಎo ಆರ್ ಮಂಜುನಾಥ್ , ಮಾಜಿ ಶಾಸಕ ಆರ್ ನರೇಂದ್ರ, ಮಾಜಿ ಶಾಸಕಿ ಪರಿಮಳ ನಾಗಪ್ಪ ಇನ್ನು ಮುಂತಾದವರು ಶ್ರೀಗಳ ಅಂತಿಮ ದರ್ಶನ ಪಡೆದು ಸಂತಾಪವನ್ನು ಸೂಚಿಸಿದ್ದಾರೆ.