ಸಿರಗುಪ್ಪ: ಉಗ್ರಾಣದಲ್ಲಿದ್ದ ಜೋಳ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು 2 ಕೋಟಿ ಯಷ್ಟು ಹಗರಣ ನಡೆದಿರುವ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ.
ಗೋದಾಮಿನ ವ್ಯವಸ್ಥಾಪಕ ಬಸವರಾಜ ಪೊಲೀಸರ ವಶದಲ್ಲಿದ್ದಾರೆ. ಬೆಂಗಳೂರು ಹಾಗೂ ಬಳ್ಳಾರಿಯಿಂದ ಆಗಮಿಸಿರುವ ಅಧಿಕಾರಿಗಳು ಸಿರುಗುಪ್ಪ ಅಧಿಕಾರಿಗಳೊಂದಿಗೆ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಿದ್ದಾರೆ.
ಅಧಿಕಾರಿಗಳು ಭೇಟಿ ನೀಡಿ ಎಪಿಎಂಸಿ ಆವರಣದಲ್ಲಿನ ಗೋದಾಮಿನಿಂದ ದಾಖಲೆಗಳು ಮತ್ತು ಬೀಗದ ಕೈ ಪಡೆದುಗೊಂಡು ಸಿಂಧನೂರು ರಸ್ತೆಯಲ್ಲಿರುವ ಹಳೆಯ ಬಾಲಾಜಿ ಅಕ್ಕಿ ಗಿರಣಿಯ ಆವರಣದಲ್ಲಿನ
ಕೆಎಸ್ ಎಫ್ ಎ ಸಿ ಸಂಖ್ಯೆ 5 ಗೋದಾಮಿನಲ್ಲಿರುವ ದಾಸ್ತಾನನ್ನು ಅಧಿಕಾರಿಗಳು ತನಿಖೆ ಮಾಡಿದ್ದಾರೆ.
ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಜೋಳ ಮತ್ತು ಅಕ್ಕಿಯ ಮೂಟೆಗಳನ್ನು ಪ್ರತ್ಯೇಕವಾಗಿರಿಸಿ ಜೋಳದ ಮೂಟೆಗಳನ್ನು ಇಡಲಾದ ಘಟಕವನ್ನು ಪರಿಶೀಲಿಸಿದ್ದಾರೆ. ಹಗರಣದಲ್ಲಿ ಇನ್ನೂ ಅನೇಕ ಅಧಿಕಾರಿಗಳ ಕೈವಾಡವಿಡ ವಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ನಗರದ ಪ್ರಮುಖ ವ್ಯಾಪಾರಸ್ಥರ ಹೆಸರುಗಳು ಸಹ ಕೇಳಿ ಬರುತ್ತಿವೆ ಎಂದು ಹೇಳಲಾಗುತ್ತಿದೆ.
ಹಗರಣದಲ್ಲಿ ಬಳ್ಳಾರಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ರವರ ಹೆಸರು ಸಹ ಹಗರಣದಲ್ಲಿ ತಳುಕು ಹಾಕಿಕೊಳ್ಳುತ್ತಿದೆ. ರೈತರು ಬೆಳೆದಿದ್ದ ಜೋಳವನ್ನು ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಸಿತ್ತು. ಪಡಿತರದಾರರಿಗೆ ಹಂಚಿಕೆಯಾಗಬೇಕಿದ್ದ ಜೋಳವು ಹೀಗೆ ಅಧಿಕಾರಿಗಳೆಂದಲೆ ನಾಪತ್ತೆಯಾಗಿರುವುದರ ಹಲವು ಶಂಶಯ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಬೆಂಗಳೂರಿನ ಆಹಾರ ಇಲಾಖೆಯ ಜನರಲ್ ಮ್ಯಾನೇಜರ್ ಬಸವರಾಜ, ಅಡಿಷನಲ್ ಡಿ ಸಿ ಮಂಜುನಾಥ, ಬಳ್ಳಾರಿಯ ಎ. ಸಿ ಆಕಾಶ್ ಶಂಕರ್, ಇಲಾಖೆ ಜಂಟಿ ನಿರ್ದೇಶಕ ಸಿ ಶ್ರೀಧರ್ ಭಟ್, ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ಸಿರುಗುಪ್ಪ ಕೃಷಿ ಇಲಾಖೆಯ ಅಧಿಕಾರಿ ನಜೀರ್ ಅಹ್ಮದ್, ಸಿರುಗುಪ್ಪ ಆಹಾರ ಇಲಾಖೆಯ ಅಧಿಕಾರಿ ಮಹೇಶ, ಸಿರುಗುಪ್ಪ ಸಿಪಿಐ ಆರ್ ಯಶವಂತ ಬಿಸ್ನಳ್ಳಿ, ಸಿರಗುಪ್ಪ ಕಂದಾಯಾಧಿಕಾರಿ ಮಂಜುನಾಥ್ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.