ಉತ್ತರ ಪ್ರದೇಶ: ಉತ್ತರ ಪ್ರದೇಶದ ಝಾನ್ಸಿ ಯಲ್ಲಿ ನಡೆದ ಭಾರತ ಕಲಾಕಾರ ಸಂಘ ಉ, ಪ್ರ. ಝಾನ್ಸಿ ಕಲಾ ಮಹೋತ್ಸವ ಇದೇ ತಿಂಗಳ ಮಾರ್ಚ್ 16,17,18, ರಂದು ನಡೆಯಿತು.
ಕಾರ್ಯಕ್ರಮಕ್ಕೆ ಕರ್ನಾಟಕದಿಂದ BKS ಕಾರ್ಯದರ್ಶಿಯಾದ N ಕುಮಾರ ಹಾಗೂ ತೆಲಂಗಾಣಾ, ತಮಿಳುನಾಡು, ಕೇರಳ, ಚತ್ತಿಸ್ಗಡ, ಹರಿಯಾಣ, ಕರ್ನಾಟಕ ಸೇರಿದಂತೆ ಇತರೆ ಎಲ್ಲಾ ರಾಜ್ಯದ ಕಲಾಕಾರರು ಭಾಗವಹಿಸಿದ್ದರು.
ಕರ್ನಾಟಕದಿಂದ ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಹಾಳ ಗ್ರಾಮದ ಮೆಹಬೂಬ್ ಅರ್ಟ್ಸ್ ನಾಗರಹಾಳ ರವರಿಗೆ “ದಿ ಬೆಸ್ಟ್ ಆರ್ಟಿಸ್ಟ್ ಝಾನ್ಸಿ” 2023 ಅವಾರ್ಡ್ ನೀಡಿ ಸನ್ಮಾನಿಸಿಲಾಗಿದೆ.
ಈ ವೇಳೆ ಮಹೆಬೂಬ್ ರವರು ಝಾನ್ಸಿಯ ಮಂತ್ರಿಯಾದ ಹರಿಗೋವಿಂದ ಕುಶ್ವಹ ಅವರಿಗೆ ನಮ್ಮ ಕರ್ನಾಟಕದ ರಂಗಭೂಮಿ ಕಲೆಯ ಬಗ್ಗೆ ತಿಳಿಸಿದರು. ಅದಕ್ಕೆ ಕಶ್ವಹ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ದಿ ಬೆಸ್ಟ್ ಆರ್ಟಿಸ್ಟ್ ಝಾನ್ಸಿ” ಅವಾರ್ಡ್ ಪಡೆದ ಮಹಿಬೂಬ್ ರವರಿಗೆ ಹಿತೈಸಿಗಳು, ಸ್ವ ಗ್ರಾಮದ ಯುವಕರು ಹಾಗೂ ಜಿಲ್ಲೆಯ ಜನತೆ ಶುಭ ಹಾರೈಸುತ್ತಿದ್ದಾರೆ.