ಇಂಡಿ : ಪಟ್ಟಣದ ಬೀರಪ್ಪ ನಗರದಲ್ಲಿಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಜೀ ರವರ ಜನ್ಮದಿನದ ಪ್ರಯುಕ್ತ ಇಂಡಿ ತಾಲ್ಲೂಕಾ ಕರ್ನಾಟಕ ರಾಷ್ಟ್ರ ಸಮಿತಿ(ಕೆ.ಆರ್.ಎಸ್) ಪಕ್ಷದ ವತಿಯಿಂದ ಗಾಂಧೀಜಿ ಹಾಗೂ ಶಾಸ್ತ್ರಿಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಪಿಸಿ ಸಂಭ್ರಮದಿಂದ ಮಹನೀಯರ ಜನ್ಮದಿನ ಆಚರಿಸಲಾಯಿತು…
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಸುರೇಂದ್ರ ಕುನಸಾಳೆ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರಿಜೀ ಅವರ ಸರಳ ಜೀವನ, ಸ್ವಾತಂತ್ರ್ಯ ಹೋರಾಟ ಮೂಲಕ ದೇಶಕ್ಕೆ ನೀಡಿದ ಕೊಡುಗೆ ಅನನ್ಯ. ಈ ಮಹನೀಯರ ಆದರ್ಶ ಗುಣಗಳು ನಾವು ನಮ್ಮ ಪೀಳಿಗೆಗೆ ಬದುಕಿನಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು…
ಕಾರ್ಯಕ್ರಮದಲ್ಲಿ ಕೆ.ಆರ್.ಎಸ್ ಪಕ್ಷದ ಉಪಾಧ್ಯಕ್ಷ ಭೀಮಾಶಂಕರ ಕಾಂಬಳೆ, ಪ್ರಧಾನ ಕಾರ್ಯದರ್ಶಿ ದೇಸು ಚವ್ಹಾಣ, ಎಸ್ಸಿ-ಎಸ್ಟಿ ಘಟಕಾಧ್ಯಕ್ಷ ಗಣಪತಿ ರಾಠೋಡ, ಯುವ ಘಟಕಾಧ್ಯಕ್ಷ ಅಶೋಕ ಜಾಧವ, ನಗರ ಘಟಕದ ಅಧ್ಯಕ್ಷರು ಗೋಪಾಲ ಸಣತಂಗಿ, ಇಂಡಿ ತಾಲ್ಲೂಕಿನ ಪಕ್ಷದ ಸೇನಾನಿಗಳಾದ ಅಶೋಕ ರಾಠೋಡ, ಪಂಡಿತ, ಬೇಲ್ಲೇನವರ, ಸುನಿಲ್ ಕಟ್ಟಿಮನಿ, ದಿಲೀಪ ಕಟ್ಟಿಮನಿ ಸೇರಿ ಅನೇಕರು ಉಪಸ್ಥಿತರಿದ್ದರು…