ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ
ಇಂಡಿ : ಹಲಸಂಗಿಯ ಇಂದು ಸಾಹಿತ್ಯಕ ಆಧ್ಯಾತ್ಮಿಕ ಮತ್ತು ಶ್ರೀ ಅರಬಿಂಧೋ ಮಹರ್ಷಿಗಳ ವ್ಯಕ್ತಿ ಹಾಗೂ ರಾಷ್ಟ್ರ ನಿರ್ಮಾಣದ ಕನಸ್ಸಿನ ಕೇಂದ್ರವಾಗಿದ್ದು ಮಧುರಚನ್ನರಿಂದ ನವೋದಯದ ನಾಲ್ಕು ಸಾಹಿತ್ಯ ಕೇಂದ್ರಗಳಲ್ಲಿ ಹಲಸಂಗಿ ಯನ್ನು ಸಾಹಿತ್ಯಕಷ್ಟೆ ಮಿತಿ ಗೊಳಿಸದೆ ಆಧ್ಯಾತ್ಮಿಕ ವಾಗಿ ಮತ್ತು ಸಾಂಸ್ಕೃತಿಕ ವಾಗಿ ಪುನರುಜ್ಜೀವನಗೊಳಿಸಿದ ಹಲಸಂಗಿ ಗೆಳೆಯರಲ್ಲಿ ಮಧುರ ಚನ್ನರು ಅಧ್ವೀತಿಯರಾಗಿದ್ದಾರೆ ಎಂದು ಸಾಹಿತಿ ಗೀತಯೋಗಿ ಹೇಳಿದರು.
ನನ್ನನಲ್ಲ ಮಧುರಗೀತ ಸಂಶೋಧನಾ ಲೇಖನಗಳು ಆತ್ಮಶೋದ ಮುಂತಾದ ಮಧುರ ಚನ್ನರ ಕೃತಿಗಳಲ್ಲಿ ಬದುಕನ್ನು ಬರಿ ವ್ಯವಹಾರ ಗೊಳಸದೆ ಸತ್ಯ ಶೋಧದ ಹೊಳಹುಗಳು ಇವೆ. ಮಧುರ ಚನ್ನರ ಮರಣ ದಿನಾಂಕ 15- 8- 1953 ಶ್ರೀ ಅರಬಿಂದೊ ಅವರ ಜನ್ಮ ದಿನಾಂಕ 15-8-1882 ಈ ದಿನಾಂಕ ಮತ್ತು ತಿಂಗಳು ಶ್ರೀ ಅರಬಿಂದೋ ಮತ್ತು ಮಧುರ ಚನ್ನರ ನಡುವಿನ ಆಧ್ಯಾತ್ಮಿಕ ಸಂಭಂದ ತಿಳಿಸುತ್ತದೆ ಎಂದು ಅಂಭಾ ಫೌಂಡೇಶನ್ ಟ್ರಸ್ಟ್ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಹಲಸಂಗಿ ಸಯುಂಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಧುರ ಚೆನ್ನರ 122 ನೇ ಜನ್ಮ ದಿನಾಚರಣೆ ಅಂಗವಾಗಿ ನೀಡಿದ ಉಪನ್ಯಾಸ ದಲ್ಲಿ ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಶಿಕ್ಷಕ ಧಶರಥ ಕೋರಿ ಅವರು ಮಾತನಾಡಿ, ಬಸವಣ್ಣನವರ ವಂಶಾವಳಿಯ ಮಾಹಿತಿ ಇರುವ ಅರ್ಜುನವಾಡಾ ಶಾಸನವನ್ನು ಮೊಟ್ಟ ಶೋಧಿಸಿದವರು ಮಧುರ ಚನ್ನರು. ಅವರು ಇನ್ನೊಂದಿಷ್ಟು ವರ್ಷದ ಬದುಕಿದ್ದರೆ ಜ್ಞಾನ ಪೀಠ ಪ್ರಶಸ್ತಿಗೆ ಬಾಜನರಾಗುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಗಿಶ್ವರ ಗಲಗಲಿ, ಆನಂದ ಗಲಗಲಿ ಮುಖ್ಯ ಗುರುಗಳಾದ ಎಲ್ ಎಸ್ ಹೊನಕಟ್ಟಿ, ಶಿಕ್ಷಕ ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.