ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವರು ಒಬ್ಬರು : ಎಸಿ ಅಬೀದ್ ಗದ್ಯಾಳ
ಇಂಡಿ : ೧೨ ನೇ ಶತಮಾನದಲ್ಲಿ ಹಿಂದುಳಿದ ಹಾಗೂ ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವರು ಒಬ್ಬರು. ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ ಜನರಲ್ಲಿ ಭಕ್ತಿ ಪ್ರಧಾನ ಚಿಂತನೆಗಳನ್ನು ಮೂಡಿಸಿದ ಮಾಚಿದೇವರ ತತ್ವಾದರ್ಶಗಳು ಸರ್ವಕಾಲಕ್ಕೂ ಅನ್ವಯ ಎಂದು ಕಂದಾಯ ಉಪವಿಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡ ಮಡಿವಾಳ ಮಾಚಿದೇವರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದ ಹೋರಾಟದಲ್ಲಿ ಮಾಚಿದೇವರು ತಮ್ಮ ಪರಾಕ್ರಮದಿಂದ ವಚನ ಸಾಹಿತ್ಯ ಉಳಿಸುವಲ್ಲಿ ಅನುಪಮ ಸೇವೆಗೈದಿದ್ದಾರೆ. ಮಡಿವಾಳ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ, ದಿಟ್ಟ ಗಣಾಚಾರಿ ಎಂದು ಹೇಳಿದರು. ಸಮಾಜದ ಧುರೀಣ ಅಗಸರ ಮಾತನಾಡಿ, ಮೇಲು ಕೀಳು, ಬಡವರು,ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೊಳಗಾದವರ ಬಗ್ಗೆ ಚಿಂತಿಸಿ, ವ್ಯಕ್ತಿ-ವ್ಯಕ್ತಿಗಳ ನಡುವೆ ಇರುವ ಅಂತರವನ್ನು ಹೋಗಲಾಡಿಸಲು ಹೋರಾಡಿದ ಮಾಚಿದೇವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ, ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ರಾಹೂರ, ಎಸ್.ಆರ್.ಮುಜಗೊಂಡ, ಸಂತೋಷ ಮ್ಯಾಕೇರಿ, ವೀಣಾ ಕೋಳುರಗಿ, ಬಸವರಾಜ ಬಿರಾದಾರ, ಶ್ರೀಮತಿ ಎಸ್,ಎನ್,ಕೊಡತೆ, ಸಂಕೇತಾ ಪಾಟೀಲ ,ಎಚ್.ಎಚ್. ಗುನ್ನಾಪುರ, ಬಿ.ಎ.ಗುನ್ನಾಪುರ, ಶೃತಿ ಖೇಡಗಿ, ದಾನಮ್ಮ ಕಂಬಾರ, ಬಸವರಾಜ ಅಗಸರ, ಪ್ರಕಾಶ ಅಗಸರ, ಶಿವು ಅಗಸರ, ಮಹೇಶ ಮಡಿವಾಳರ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಂಡ ಮಡಿವಾಳ ಮಾಚಿದೇವರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.