ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ; ತಾಲ್ಲೂಕಿನ ಹುಲ್ಲೂರು ಚನ್ನಬಸವ ಶ್ರೀ ಏಜ್ಯೂಕೇಷನ್ ರೂರಲ್ ಕಲ್ಚರಲ್ ಸೂಶಯಿಟಿ ವತಿಯಿಂದ 2024_25 ನೇ ಸಾಲಿನಲ್ಲಿ ಕೊಡಮಾಡುವ ರಾಜ್ಯಮಟ್ಟದ ಚನ್ನಬಸವ ಶ್ರೀ ಪ್ರಶಸ್ತಿಗೆ ೧೦ ವಿವಿಧ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದ್ದು ಮಾ 22 ಶನಿವಾರ ಸಾಯಂಕಾಲ 4 ಗಂಟೆಗೆ ಹುಲ್ಲೂರು ಎಸ್ ಎನ್ ಡಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಧಾನ ಮಾಡಲಾಗುತ್ತದೆ ಎಂದು ಸೂಸಾಯಿಟಿ ಅಧ್ಯಕ್ಷ ಮಂಜುನಾಥ ಕೊಪ್ಪ ತಿಳಿಸಿದ್ದಾರೆ
ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರು; ಸಿದ್ದನಗೌಡ ಮಂಗಳೂರು ( ಶಿಕ್ಷಣ ಕ್ಷೇತ್ರ) ಚೇತನ ಶಿವಶಿಂಪಿ ( ಪತ್ರಿಕಾ ಕ್ಷೇತ್ರ) ಅನಿಲ್ ಕುಮಾರ್ ತೇಲಂಗಿ ( ಮಾಧ್ಯಮ ಕ್ಷೇತ್ರ) ಪ್ರಶಾಂತ ಕಾಳೆ ( ಯುವ ಹೋರಾಟಗಾರ) ಶಿವಾನಂದ ವಾಲಿ(ಸಾಮಾಜಿಕ ಹೋರಾಟ) ಹೇಮಾ ಬಿರಾದಾರ ( ಮಹಿಳಾ ಸಾಧಕಿ) ಎಸ್ ಹೆಚ್ ಲೋಟಗೇರಿ ( ನ್ಯಾಯಾಂಗ) ಡಾ.ಚಂದ್ರಶೇಖರ ಶಿವಯೋಗಿಮಠ( ವೈದ್ಯಕೀಯ) ಎಂ ಡಿ ಆನಂದ( ಸಂಗೀತ) ಸುಮಲತಾ ಗಡಿಯಪ್ಪನವರ ( ಸಾಹಿತ್ಯ)
ಕಾರ್ಯಕ್ರಮದ ಉದ್ಘಾಟನೆ ಶಾಸಕ ಸಿ.ಎಸ್ ನಾಡಗೌಡ ಮಾಡಲಿದ್ದು ಕಾರ್ಯಕ್ರಮ ದಿವ್ಯ ಸಾನಿಧ್ಯ ಜಮಖಂಡಿ ಓಲೇಮಠದ ಶ್ರೀ ಆನಂದ ದೇವರು ವಹಿಸಲಿದ್ದು ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆಪ್ತಸಹಾಯಕ ಸುರೇಶಗೌಡ ಹಿರೇಮಠ, ಪ್ರಭುಗೌಡ ದೇಸಾಯಿ, ಮಲ್ಲಿಕಾರ್ಜುನ ಲೋಣಿ, ಮಲ್ಲು ಬೆಳ್ಳುಬ್ಬಿ, ಸೇರಿದಂತೆ ಅನೇಕ ಗಣ್ಯ ಮಾನ್ಯರು ರಾಜಕೀಯ ಧುರಿಣರು ಭಾಗವಹಿಸಲಿದ್ದಾರೆ.