ಲಿ. ಮುರುಘೇಂದ್ರ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಡಿ.5-6 ರಂದು ಜಾತ್ರಾ ಮಹೋತ್ಸವ
ಇಂಡಿ: ತಾಲೂಕಿನ ಶಿರಶ್ಯಾಡ ಸಂಸ್ಥಾನ ಹಿರೇಮಠದಲ್ಲಿ ಲಿಂಗೈಕ್ಯ ಮುರುಘೇಂದ್ರ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವ ಹಾಗೂ ನೂತನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ. ಡಿ. ೫ರಂದು ಬೆಳಿಗ್ಗೆ ೧೦ ಘಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ತದನಂತರ ರಾತ್ರಿ ೮ ಘಂಟೆಗೆ ಪುರಾಣ ಮಹಾಮಂಗಲೋತ್ಸವ ನಡೆಯುತ್ತದೆ. ಅದೇದಿನ ರಾತ್ರಿ ೧೯ಕ್ಕೆ ಭಕ್ತಾದಿಗಳಿಂದ ಜಾಗರಣೆ ಕಾರ್ಯಕ್ರಮವಿರುತ್ತದೆ.
ಡಿ. ೦೬ ಶುಕ್ರವಾರದಂದು ನಸುಕಿನ ಜಾವ ೫:೦೦ ಕ್ಕೆ ಲಿಂ. ಮುರುಘೇಂದ್ರ ಶಿವಾಚಾರ್ಯರ ಗದ್ದುಗೆಗೆ ಮಹಾ ರುದ್ರಾಭಿಷೇಕ, ತದನಂತರ ಲಿಂಗದೀಕ್ಷೆ, ಅಯ್ಯಾಚಾರ ನಡೆಯಲಿದ್ದು ಬೆಳಿಗ್ಗೆ ೮:೦೦ ಗಂಟೆಗೆ ನೂತನ ಪಲ್ಲಕ್ಕಿ ಉತ್ಸವವು ಗ್ರಾಮದಲ್ಲಿ ಮುತ್ತೈದೆಯರಿಂದ ಕುಂಭ ಹೊತ್ತು ಸಕಲ ವಾಧ್ಯ ವೈಭವಗಳೊಂದಿಗೆ ನೆರವೇರಲಿದೆ. ಎಂದು ಜಾತ್ರಾ ಕಮಿಟಿ ತಿಳಿಸಿದೆ.