ಇಂಡಿ: ನಿಂಬೆ ನಾಡಿನ ಬಬಲಾದ ಗ್ರಾಮ ಪಂಚಾಯತ ವ್ಶಾಪ್ತಿಯಲ್ಲಿ ಬರುವ ಜಿನುಗು ಕೆರೆ ಹೂಳೆತ್ತುವ ಕಾಮಗಾರಿ ಮಾಡುತ್ತಿರುವ 160 ನರೇಗಾ ಉದ್ಶೋಗ ಖಾತ್ರಿ ಯೋಜನೆಯ ಕಾರ್ಮಿಕರ ಆರೋಗ್ಶ ಕ್ಷೇಮ ವಿಚಾರಿಸಿ ಕಾರ್ಮಿಕರಿಗೆ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಕಾರ್ಮಿಕ ದಿನದ ಶುಭಕೋರಿದರು.
ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರೀತು ದಶವಂತ ಕಾರ್ಮಿಕರು ರಾಷ್ಟ್ರದ ಭವಿಷ್ಶವನ್ನು ರೂಪಿಸುವಲ್ಲಿ ಕಾರ್ಮಿಕರ ಪಾತ್ರವು ಬಹು ದೊಡ್ಡದಾಗಿದೆ. ಕಾರ್ಮಿಕರಿಗೆ ಮಾನವ ಹಕ್ಕುಗಳನ್ನು ಕೊಟ್ಟಂತಹ ಬಾಬಾಸಾಹೇಬರನ್ನು ಮರೆತ ಜನ ಜಗತ್ತಿನ ಎಲ್ಲಾ ಕಾರ್ಮಿಕರು ಒಂದಾಗಬೇಕು ಎಂಬುದು ಈ ದಿನದ ಘೋಷವಾಕ್ಶವಾಗಿರುತ್ತದೆ. ಕಾರ್ಮಿಕ ವರ್ಗವು ಜಗತ್ತಿನ ಹಿತಕ್ಕಾಗಿ ಹೆಣಗಾಡಿ ತ್ಶಾಗ ಮಾಡಿದೆ. ಡಾ||ಬಾಬಾಸಾಹೇಬ ಅಂಬೇಡ್ಕರ್ ರವರು ಲಿಂಗ ತಾರತಮ್ಶವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು ಎಂದು ವಾದಿಸಿ ಯಶಸ್ವಿಯಾದರು. ಸರಕಾರಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಹೆರಿಗೆಯ ನಂತರ ವೇತನ ಸಹಿತ 3 ತಿಂಗಳು ರಜೆ ದೊರಕಿಸಿಕೊಡುವಲ್ಲಿ ಅಂಬೇಡ್ಕರ ಶ್ರಮಿಸಿದರು. 12 ಘಂಟೆ ಕೆಲಸದ ಸಮಯವನ್ನು 8 ಘಂಟೆಗೆ ಇಳಿಸಿ 4 ಘಂಟೆ ಸಮಯವನ್ನು ತಮ್ಮ ದಿನನಿತ್ಶದ ಕೆಲಸಗಳಿಗೆ ಕೊಡಬೇಕು ಅಂತ ಪ್ರತಿಪಾದಿಸಿದರು. ಕಾರ್ಮಿಕರ ಕುಟುಂಬಗಳಿಗೆ ಆರೋಗ್ಶ ವಿಮೆˌ ಮಕ್ಕಳಿಗೆ ಶಿಷ್ಶವೇತನˌ ಅಷ್ಟೇ ಅಲ್ಲದೆ ಮದುವೆಗಳಿಗೆ 50 ಸಾವಿರ ಸಹಾಯದನ, ಮಾಸಿಕ ಪಿಂಚಣಿˌ ಅಂಗವಿಕಲ ಪಿಂಚಣಿ ˌ ವಯೋವ್ರುಧ್ಧ ಪಿಂಚಣಿ ˌ ಅಪಘಾತಗಳಲ್ಲಿ ಮಡಿದ ಕಾರ್ಮಿಕರಿಗೆ 5ಲಕ್ಷ ಪರಿಹಾರˌ ಮುಂತಾದ ಯೋಜನೆಗಳನ್ನು ರೂಪಿಸಿದ ಮಾನವ ಹಕ್ಕುಗಳ ಪ್ರತಿಪಾದಕ ಡಾ|| ಬಿ ಆರ್ ಅಂಬೇಡ್ಕರ್ ಅವರ ಕೊಡುಗೆಯನ್ನು ಈ ದೇಶದ ಜನರು ಮರೆಯಬಾರದು ಅಂತ ತಿಳಿಸಿದರು.
ಎಲ್ಲಾ ಕ್ಷೇತ್ರಗಳಲ್ಲಿಯು ಬಾಬಾಸಾಹೇಬರ ಕೊಡುಗೆ ಅನನ್ಶವಾದದ್ದು. ಪ್ರತಿಯೊಬ್ಬರೂ ಕಾರ್ಮಿಕರ ಕಾರ್ಡುಗಳನ್ನು ಮಾಡಿಸಿಕೊಂಡು ಅವುಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ನುಡಿದರು. ಹಾಗೆಯೇ ವಿಶ್ವಗುರು ಬಸವಣ್ಣ, ಬುದ್ಧ, ಜ್ಯೋತಿಬಾ ಫುಲೆ, ಸಾವಿತ್ರಾ ಬಾ ಪುಲೆ , ಪೆರಿಯಾರ್ ರಾಮಸ್ವಾಮಿ ಅಯ್ಯಂಗಾರ್, ಶಿವಾಜಿ ಮಹಾರಾಜ್, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದ ಸಮಾಜ ಸುಧಾರಕರನ್ನು ಈ ಸಂದರ್ಭದಲ್ಲಿ ನೆನೆದು ಅವರ ಆದರ್ಶಗಳನ್ನು ನಾವೂ ನೀವೆಲ್ಲ ಮೈಗೂಡಿಸಿಕೊಳ್ಳಬೇಕು ಅಂತ ತಿಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃಧ್ಧಿ ಅಧಿಕಾರಿ ಎಸ್ ಡಿ ಬಿರಾದಾರ ಮತ್ತು ಗ್ರಾಮ ಪಂಚಾಯತ ಸದಸ್ಶರುˌ ಹಾಗೂ ಡಾ||ಭುವನೇಶ್ವರಿ ಕಾಂಬಳೆ ಸಾಮಾಜೀಕ ಹೋರಾಟಗಾರರು, ಜನಸೇವಕ ಬಳಗದ ಸಹಸ್ರಾರು ಸದಸ್ಶರು, ವಿಠೋಬ ದಶವಂತ ˌ ಅನೀಲ ದಶವಂತ ಗುಂಡು ದಶವಂತ ಹಣಮಂತ ಬಿರಾದಾರˌ ಮಲ್ಲಿಕಾರ್ಜುನ ದಶವಂತˌ ಪರಸುರಾಮ ದಶವಂತ ,ಸುಧಾಕರ ನಾಟೀಕರˌ ಬಲವಂತ ಪಾರೆˌ ಚನ್ನಪ್ಪ ದಶವಂತ ˌ ಮುತ್ತಣಗೌಡ ಬಿರಾದಾರ ಸೇರಿದಂತೆ ˌ ಗ್ರಾಮದ ಮುಖಂಡರುˌ ಮಹಿಳೆಯರು ಭಾಗವಹಿಸಿದ್ದರು.ˌ