ಇಂಡಿ : ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಸಬ್ ರೆಜಿಸ್ಟರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರೀಶಿಲನೆ ಮಾಡುತ್ತಿದ್ದಾರೆ.
ಬೆಳಂ ಬೆಳಿಗ್ಗೆ ದಾಳಿ ನಡೆಸಿದ ಅಧಿಕಾರಿಗಳು ಸಬ್ ರಿಜಿಸ್ಟರ್ ಅಧಿಕಾರಿ ಮಹ್ಮಮದ ರಫೀಕ ಪಟೇಲ್ ಮತ್ತು ಕೆಲವು ಏಜೆಂಟರನ್ನ ಕ್ಯಾಚ್ ಮಾಡಿ ತನಿಖೆ ಮಾಡುತ್ತಿದ್ದಾರೆ. ಸಬ್ ರೆಜಿಸ್ಟರ್ ಕಚೇರಿಯಿಂದ ಹಲವು ದೂರುಗಳು ಬಂದಿರುವ ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಕಳೆದ ಹಲವು ದಿನಗಳಿಂದ ಸಬ್ ರೆಜಿಸ್ಟರ್ ಕಚೇರಿಯ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದವು. ಅದಕ್ಕಾಗಿ ಲೆಕ್ಕಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಅನೀತಾ ಹದ್ದಣವರ ಮತ್ತು ಡಿ.ವಾಯ್.ಎಸ್ಪಿ ಅರುಣ ನಾಯಕ ಜೊತೆಗೆ ಸಿಬ್ಬಂದಿ ವರ್ಗ ಉಪಸ್ಥಿತಿತರು. ಇನ್ನೂ ತನಿಖೆ ಮುಂದುವರೆದಿದೆ.