85 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನರ
ಮತದಾನ ಕುರಿತು ತರಬೇತಿ ಜವಾಬ್ದಾರಿಯಿಂದ ಚುನಾವಣೆ ಕರ್ತವ್ಯ ನಿರ್ವಹಿಸಿ – ಎಸಿ ಅಬೀದ್
ಗದ್ಯಾಳ
ಇಂಡಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣೆ ಕರ್ತವ್ಯಗಳಿಗೆ
ನಿಯೋಜನೆಗೊಂಡಿರುವ ಅಧಿಕಾರಿಗಳು
ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಎಂದು
ಸಹಾಯಕ ಚುನಾವಣೆ ಅಧಿಕಾರಿ ಕಂದಾಯ
ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ 85 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನರ ಮತದಾನ ಕುರಿತು ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಶಿಬಿರದಲ್ಲಿ ಮಾತನಾಡುತ್ತಿದ್ದರು. ಮತದಾರರ ಪಟ್ಟಿಯ ಅನುಸಾರ ಬೂತ್ ಮಟ್ಟದ ಅಧಿಕಾರಿಗಳು ಮಾ.22 ರಿಂದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಹಾಗೂ ವಿಶೇಷಚೇತನರ ಮನೆ ಮನೆಗೆ ಭೇಟಿ ನೀಡಿ 12 ಡಿ ಅರ್ಜಿಗಳನ್ನು ಭರ್ತಿ ಮಾಡಬೇಕು. ಅಂಚೆ ಮತದಾನಕ್ಕೆ 12 ಡಿ ಮೂಲಕ ದೃಡಿಕರಿಸಿದವರು ಮತಗಟ್ಟೆಗಳಿಗೆ ತೆರಳಿ
ಮತದಾನ ಮಾಡಲು ಅವಕಾಶ ವಿರುವದಿಲ್ಲ.
ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಶೇ 40 ಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೀಡಾಗಿರುವ ವಿಶೇಷ ಚೇತನರು ಮಾತ್ರ ಅಂಚೆ ಮತದಾನ ಸೌಲಭ್ಯಕ್ಕೆ
ಅರ್ಹರಾಗಿರುತ್ತಾರೆ. ಚುನಾವಣೆ ಅಧಿಕಸೂಚನೆಯ
ನಂತರದ 5 ದಿನದೊಳಗೆ ಭರ್ತಿ ಮಾಡಿದ
ದೃಡಿಕೃತ 12 ಡಿ ನಮೂನೆಯನ್ನು ಸಂಬಂಧಪಟ್ಟ
ಚುನಾವಣೆ ಅಧಿಕಾರಿಗೆ ಸಲ್ಲಿಸಬೇಕು ಎಂದು ಗದ್ಯಾಳ
ಹೇಳಿದರು. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಶೇ40 ಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೀಡಾಗಿರುವ ಮತದಾರರಿಗೆ 12 ಡಿ ತುಂಬಿ ಕೊಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ನೀಡಲಾಗಿದೆ ಎಂದರು.
ತಹಸೀಲ್ದಾರ ಮಂಜುಳಾ ನಾಯಕ, ಬಿಆರ್‍ಸಿ ಕೋ ಆರ್ಡಿನೇಟರ್ ಎಸ್.ಆರ್.ನಡಗಡ್ಡಿ, ಗ್ರೇಡ್ 2
ತಹಸೀಲ್ದಾರ ಧನಪಾಲಶೆಟ್ಟಿ ದೇವೂರ, ಚುನಾವಣೆ
ಶಿರಸ್ತೆದಾರ ಆರ್.ಬಿ. ಮೂಗಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ
ಕಾರ್ಯಾಲಯದಲ್ಲಿ ಚುನಾವಣೆ ನಿಮಿತ್ಯ ಬಿಆರ್‍ಸಿಗಳಿಗೆ ತರಬೇತಿ ಶಿಬಿರದಲ್ಲಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.