ಹೆಚ್ ಡಿ ಕುಮಾರಸ್ವಾಮಿಯವರ ಪರ ಮಂಡ್ಯದಲ್ಲಿ ಮತಯಾಚನೆ : ಶಿವಕುಮಾರ್ ನಾಟೀಕಾರ
ಮಂಡ್ಯ : ಮಾಜಿ ಮುಖ್ಯ ಮಂತ್ರಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ ಡಿ ಕುಮಾರಸ್ವಾಮಿ ಪರವಾಗಿ ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಜೆಡಿಎಸ್ ಮುಖಂಡ ಶಿವಕುಮಾರ್ ರ್ಯಾಲಿಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.
ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹಳ್ಳದಕೊಪ್ಪಲು, ಕೊನೆಗಾನಹಳ್ಳಿ,ಕಣಿವೆಕೊಪ್ಪಲು, ಸಾತನೂರು,ಕೆರೆಗೂಡುಮೊಳೆ,ಮರಡಿಪುರ,ಹುಚ್ಚೆಗೌಡನಕೊಪ್ಪಲು ಗ್ರಾಮಗಳಿಗೆ ಭೇಟಿ ನೀಡಿ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾದ ಹೆಚ್ ಡಿ ಕುಮಾರಸ್ವಾಮಿಯವರ ಪರ ಮತಯಾಚನೆ ಮಾಡಲಾಯಿತು .ಮಂಡ್ಯದ ಶಂಕರಮಠದ ಶನೇಶ್ವರ ಸ್ವಾಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಲಾಯಿತು, ಮತ್ತು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಮಚಂದ್ರರವರು,ಬಿಜೆಪಿ ಮುಖಂಡರಾದ ಅಶೋಕ ಜಯರಾಮರವರು,ಜೆಡಿಎಸ್ ಮುಖಂಡರಾದ ಕೆಎಸ್ ವಿಜಯಾನಂದರವರಿದ್ದರು