ಲೋಕಸಭಾ ಚುನಾವಣೆ 2024 : ಶಿಕ್ಷಕ ಅಮಾನತು..! ಏಕೆ ಗೊತ್ತಾ..?
ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯಲೋಪ ಹಿನ್ನೆಲೆ ಶಿಕ್ಷಕ ಅಮಾನತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಟಿ.ಭೂಬಾಲನ್ ಆದೇಶ ಮಾಡಿದ್ದಾರೆ. ಅರಕೇರಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮುಜಮ್ಮಿಲ ಮುಲ್ಲಾ ಅಮಾನತುಕೊಂಡಿರುವ ಶಿಕ್ಷಕ. ಇನ್ನು ಮತಗಟ್ಟೆ ಮಟ್ಟದ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸಲು ನಿರಾಕರಣೆ ಹಿನ್ನೆಲೆ ಅಮಾನತು ಮಾಡಲಾಗಿದೆ. 14-03-2024ರಂದು ಕರ್ತವ್ಯಕ್ಕೆ ಹಾಜರು ಆಗವಂತೆ ಆದೇಶ ಹೊರಡಿಸಲಾಗಿತ್ತು. ಅಂದಿನಿಂದ ಕರ್ತವ್ಯಕ್ಕೆ ಹಾಜರಾಗದೇ ಕರ್ತವ್ಯಲೋಪ ಎಸಗಿದ್ದಾರೆ. ಅದಕ್ಕಾಗಿ ಅಮಾನತುಗೈದು ಜಿಲ್ಲಾ ಚುನಾವಣಾಧಿಕಾರಿ ಭೂಬಾಲನ್ ಆದೇಶ ಹೊರಡಿಸಿದ್ದಾರೆ.