ಲೋಕಸಭಾ 2024 : ಇಂಡಿಯಲ್ಲಿ ಸ್ವೀಪ್ ಸಮಿತಿವತಿಯಿಂದ ಮತದಾನ ಜಾಗೃತಿ ಜಾಥಾ..!
ಇಂಡಿ: ತಾಲೂಕಾ ಸ್ವೀಫ್ ಸಮಿತಿ, ತಾ.ಪಂ ಆಡಳಿತ ವತಿಯಿಂದ ಪಟ್ಟಣದಲ್ಲಿ ಕಾಲ್ನಡಿಗೆಯ ಮೂಲಕ ಮತದಾನದ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ತಾ.ಪಂ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನಿ ನೀಡಿ ಮಾತನಾಡಿದ ತಾ.ಪಂ ಇಒ ನೀಲಗಂಗಾ ಬಬಲಾದ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ಮತದಾನದ ಹಬ್ಬ
ಆರಂಭವಾಗಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬ ಮತದಾರರು ಕೂಡ ತಪ್ಪದೇ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಮಂಡಿಸಬೇಕು ಎಂದರು.
ಪಟ್ಟಣದ ತಾ.ಪಂ ಆವರಣದಲ್ಲಿ ಸಾರ್ವತಿಕ ಲೋಕಸಭಾ
ಚುನಾವಣೆ ಹಿನ್ನೆಲೆಯಲ್ಲಿ ಮಾನವ ಸರಪಳಿ ನಿರ್ಮಿಸಲಾಗಿತ್ತು. ನಂತರ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಹಾಯಕ ನಿರ್ದೇಶಕರು ಗ್ರಾಮೀಣ ನರೇಗಾ ಉದ್ಯೋಗ ಖಾತ್ರೆಯ ಸಂಜಯ ಖಡಗೇಕರ, ಟಿಎಚ್‍ಒ ಅರ್ಚನಾ ಕುಲಕರ್ಣಿ, ಪಶು ವೈದ್ಯಾಧಿಕಾರಿ ಬಿ.ಎಚ್. ಕನ್ನೂರ, ಎಇಇ ನಾಯಕ, ಬಿ.ಜೆ. ಇಂಡಿ, ಚಂದ್ರಶೇಖರ ವಾಲಿಕಾರ, ಅರಣ್ಯ ಇಲಾಖೆಯ ರಾಜೇಂದ್ರ ಹುನ್ನೂರ, ನಂದೀಪ ರಾಠೋಡ, ಅಪ್ಪಾಶಾ ಲಾಳಸೇರಿ, ಸಿ.ಜಿ. ಪಾರೆ, ಬಸವರಾಜ ಬಬಲಾದ, ಎಚ್.ಆರ್. ರಜಪೂರ ಮತ್ತಿತರಿದ್ದರು.
ಇಂಡಿ: ಪಟ್ಟಣದ ತಾ.ಪಂ ಕಚೇರಿಯ ಆವರಣದಲ್ಲಿ ಲೋಕಸಭಾ ಚುನಾವಣೆ ನಿಮಿತ್ಯ ನೀಲಗಂಗಾ ಬಬಲಾದ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು.