ಲೋಕಸಭಾ 2024 : ಬಾಬು ರಾಜೇಂದ್ರ ನಾಯಿಕ ನಾಮಪತ್ರ ಸಲ್ಲಿಕೆ
ವಿಜಯಪುರ : 04 ವಿಜಯಪುರ(ಪ ಜಾ) ಲೋಕಸಭೆ ಮತಕ್ಷೇತ್ರದಲ್ಲಿ ನಾಲ್ಕನೆ ದಿನವಾದ ಬುಧವಾರದಂದು ಭಾ. ಜ. ಪಕ್ಷದ ಅಭ್ಯರ್ಥಿಯಾಗಿ ಬಾಬು ರಾಜೇಂದ್ರ ನಾಯಿಕ ಅವರು ಒಂದು ನಾಮಪತ್ರ ಸಲ್ಲಿಸುವ ಮೂಲಕ ಒಟ್ಟಾರೆ ನಾಲ್ಕು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರಿಗಳು ಸಲ್ಲಿಕೆಯಾದವು. ಏಪ್ರಿಲ್ 12 ರಿಂದ ಇಲ್ಲಿಯವರೆಗೆ ಒಂಬತ್ತು ಅಭ್ಯರ್ಥಿಗಳಿಂದ ಒಟ್ಟಾರೆಯಾಗಿ ಹದಿನೆಂಟು ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.