2024 ಲೋಕಸಭಾ ಸಮರ : ಜಿ ಕುಮಾರ್ ನಾಯಕ ಮತಯಾಚನೆ..! ಯಾವ ಕ್ಷೇತ್ರದ ಅಭ್ಯರ್ಥಿ ಗೊತ್ತಾ..?
ರಾಯಚೂರು : 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಜಿ ಕುಮಾರ್ ನಾಯಕ ಮತಯಾಚನೆ ಮಾಡಿದರು.
ಪಟ್ಟಣದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ರಾಯಚೂರು ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ ಕುಮಾರ್ ನಾಯಕ ಚುನಾವಣೆ ಪ್ರಚಾರದ ಅಂಗವಾಗಿ ಮಂಗಳವಾರ ಶಹಾಪುರ ವಿಧಾನಸಭಾ ಕ್ಷೇತ್ರದ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಸಮೀತಿಯ ಕಾರ್ಯಕರ್ತರ ಸಭೆಯಲ್ಲಿ ಸಣ್ಣ ಕೈಗಾರಿಕೆ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಜಿ ಕುಮಾರ್ ನಾಯಕ ಹಾಗೂ ಕೆಂಬಾವಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದನಗೌಡ ಪೊಲೀಸ್ ಪಾಟೀಲ್, ನಿಂಗನಗೌಡ ಮಾಲಿಪಾಟೀಲ್, ಶರಣಬಸವ ಡಿಗ್ಗಾವಿ, ಮೈಪಾಲ್ ರೆಡ್ಡಿ ಸಾಹುಕಾರ ಡಿಗ್ಗಾವಿ, ವಾಮನರಾವ್ ದೇಶಪಾಂಡೆ, ಕಾಜಾ ಪಟೇಲ್ ಕಾಚೂರ್, ಆರಿಫ್ ಹುಸೇನ್ ಖಾಜಿ, ರಂಗಪ್ಪ ವಡ್ಡರ್, ದೇವು ಮ್ಯಾಗೇರಿ, ಸಾಹಿಬುಲಾಲ ಅಂ- ದೇಹಲಿ, ಶಂರ್ಕ ಖಾನಾಪುರ್, ಮೈನುದ್ದಿನ್ ಸಾಸನೂರ್, ಅಜಿಜ್ ಪಾಶ ಖಾಜಿ, ಇಸ್ಟೈಲ್ ಜಮಾದಾರ, ತಿಪ್ಪಣ್ಣ ಯಾಳಗಿ, ಪರಶುರಾಮ ಬಳಬಟ್ಟಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.