ಲೋಕ ಅದಾಲತ್ : 2398 ಪ್ರಕರಣ
ಇತ್ಯರ್ಥ : 2 ಕೋಟಿ ವಸೂಲಾತಿ
ಇಂಡಿ : ಲೋಕ ಅದಾಲತ್‍ನಲ್ಲಿ 2398 ಪ್ರಕರಣಗಳು ಇತ್ಯರ್ಥ ಗೊಂಡಿವೆ. ಕಳೆದ ಬಾರಿ ನಡೆದ ಲೋಕ
ಅದಾಲತ್‍ನಲ್ಲಿ 2100 ಪ್ರಕರಣಗಳು ಇತ್ಯರ್ಥ ಗೊಂಡಿದ್ದವು. ಮತ್ತು ಅಂದಾಜು ಎರಡು ಕೋಟಿ ರೂ
ವಸೂಲಾತಿಯಾಗಿದೆ, ನ್ಯಾಯಾಲಯದಲ್ಲಿ ಬಾಕಿ ಇರುವ
ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯಥ್ರ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸಿದೆ ಎಂದು ದಿವಾಣಿ ಕಿರಿಯ ಶ್ರೇಣಿಯ
ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಎಸ್.ಎಂ.ಈಶ್ವರ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ
ಮೆಗಾ ಲೋಕ ಅದಾಲತ್ ಕಾರ್ಯಕ್ರಮದ ನಂತರ
ಮಾತನಾಡಿದ ಅವರು ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ
ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ನಿರ್ಭಂದಕಾಜ್ಞೆ
ದಾವೆ, ವಾಹನ ಅಪಘಾತ ಪರಿಹಾರ ದಂತಹ ಪ್ರಕರಣ ಇತ್ಯರ್ಥ ಪಡಿಸಿದೆ ಎಂದು ಈಶ್ವರ ಎಸ್.ಎಂ ತಿಳಿಸಿದರು.
ಸಿಂದಗಿಯ ಹಿರಿಯ ಶ್ರೇಣಿ ನ್ಯಾಯಾದೀಶ ಇಂಡಿಯ
ನ್ಯಾಯಾಲಯದ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಿದರು. ಹಿರಿಯ ಶ್ರೇಣಿ ಹೆಚ್ಚುವರಿ ನ್ಯಾಯಾಧೀಶ
ಎಚ್.ಆರ್.ದೇವರಾಜ, ವಕೀಲರ ಸಂಘದ
ಅಧ್ಯಕ್ಷ ಪಿ.ಬಿ.ಪಾಟೀಲ, ಕಾರ್ಯದರ್ಶಿ ಎಸ್.ಆರ್. ಬಿರಾದಾರ,ನ್ಯಾಯವಾದಿಗಳಾದ ರಮೇಶ ಕಾಂತ, ಬಿ.ಬಿ.ಬಿರಾದಾರ, ಡಿ.ಎಸ್.ಮಡಿವಾಳರ, ಬಿ.ಸಿ.ತಾಂಬೆ,
ಎಸ್.ಜಿ.ಹತ್ತರಕಿ, ಕೆ.ಪಿ.ಭೈರಜಿ,ಎಸ್.ಎಸ್.ರೆಬಿನಾಳ, ಎಸ್.ಎಲ್.ಬಟಗಿ, ಪ್ರವೀಣ ಕಾಂಬಳೆ, ಝೆಡ್.ಬಿ, ಬಾಗವಾನ ಮತ್ತು ಸಿದ್ದು ಹಾವಳಗಿ ಮತ್ತಿತರಿದ್ದರು.
ಇಂಡಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತನಲ್ಲಿ ನ್ಯಾಯಾಧೀಶ ಈಶ್ವರ ಎಸ್.ಎಂ ಪಕ್ಷಿದಾರರು ಮತ್ತು ನ್ಯಾಯವಾದಿಗಳು ಪಾಲ್ಗೊಂಡಿರುವದು.
by