ಲೋಕಸಭಾ ಚುನಾವಣೆ 2024: ಭೀಮಾತೀರ ಧೂಳಖೇಡ ಚೆಕ್ ಪೊಸ್ಟನಲ್ಲಿ ಹಣ ಜಪ್ತಿ..! ಎಷ್ಟು ಗೊತ್ತಾ..?
ವಿಜಯಪುರ: ಲೋಕಸಭಾ ಚುನಾವಣಾ ಹಿನ್ನಲೆ ಮಹಾರಾಷ್ಟ್ರ ದಿಂದ ವಿಜಯಪುರ ಬರುವಾಗ ಜಿಲ್ಲೆಯ ಚಡಚಣ ಪಟ್ಟಣದ ಧೂಳಖೇಡ ಚೆಕ್ ಪೋಸ್ಟ್‌ನಲ್ಲಿ ಹಣ ಜಪ್ತಿ ಮಾಡಲಾಗಿದೆ. ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತವಾದ 4 ಲಕ್ಷ 50 ಸಾವಿರ ರೂ. ಜಪ್ತಿಗೈದಿದ್ದಾರೆ.
ಮಹಾರಾಷ್ಟ್ರರಾಜ್ಯದ ಔರಂಗಾಬಾದ ಜಿಲ್ಲೆಯ ರೋಶನ ಗಜಾನನ ಕರನಾಶೆ ಯಾವುದೇ ಅಧಿಕೃತ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದರು. ಇನ್ನು ಎಮ್ ಹೆಚ್ 20 ಎಫ್ ಯು 2039 ಕಾರ್‌ನಲ್ಲಿ 4 ಲಕ್ಷ 50 ಸಾವಿರ ರೂಪಾಯಿ ನಗದನ್ನು ತೆಗೆದುಕೊಂಡು ಧೂಳಖೇಡ ಮಾರ್ಗದಿಂದ ಬೆಂಗಳೂರ ಕಡೆ ಹೊರಟಿದ್ದರು. ಈ ವೇಳೆ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಹಣ ಸಿಕ್ಕಿದೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.