ಕೇಂದ್ರ ಮತ್ತು ರಾಜ್ಯ ಸರಕಾರ ಸ್ಥಳಿಯ
ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ತುಂಬಬೇಕು : ವಿ.ಪ. ಶಾಸಕ ಸುನೀಲಗೌಡ ಪಾಟೀಲ.
ಗ್ರಾ.ಪಂ ಸದಸ್ಯರ ಗೌರವ ಧನ ಹೆಚ್ಚಿಸುವಲ್ಲಿ ಶ್ರಮಿಸಿದ್ದೇವೆ
ಇಂಡಿ : ಗ್ರಾ. ಪಂ ಸದಸ್ಯರಿಗೆ ಗೌರವ ಧನ ಹೆಚ್ಚಿಸುವ ಜೊತೆಗೆ ಉಚಿತ ಬಸ ಪಾಸ್, ಟೋಲ್ ರಿಯಾಯಿತಿ, ಪೆನಷನ್ ಕುರಿತು ಸರಕಾರದ ಗಮನ ಸೆಳೆಯುವ ಕಾರ್ಯಮಾಡಿದ್ದೆನೆ. ಮಾಡಿದ್ದು, ಅದರಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ರೂ 5 ನೂರು ಪಡೆಯುತ್ತಿದ್ದು, ಇಂದು ಈ ಸದ್ಯ 2 ಸಾವಿರ ರೂಪಾಯಿ ಗೌರವ ಪಡೆಯುವಂತಹ ಮಹತ್ವದ ಕಾರ್ಯ ಮಾಡಿದ್ದೆವೆ ಎಂದು ವಿಧಾನ ಪರಿಷತ್ತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಜಿ.ಪಂ ವಿಜಯಪುರ, ತಾಪಂ ಇಂಡಿ ಮತ್ತು ಪುರಸಭೆ ಇಂಡಿ ಮತ್ತು ವಿಜಯಪುರ ಮತ್ತು ಬಾಗಲಕೋಟ ವಿಧಾನ ಪರಿಷತ್ತು ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಲ್ಲಿ ಸದಸ್ಯ ಸುನೀಲಗೌಡ ಪಾಟೀಲ ಇವರ ನೇತೃತ್ವದಲ್ಲಿ ನಡೆದ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಇತರೆ ರಾಜ್ಯಗಳಲ್ಲಿ ಸೇರಿದಂತೆ ಕೇರಳ ರಾಜ್ಯದಲ್ಲಿ ಗ್ರಾ.ಪಂ ಸಧ್ಯಕ್ಷರಿಗೆ ೧೩ ಸಾವಿರ ಉಪಾಧ್ಯಕ್ಷರಿಗೆ ೯ ಸಾವಿರ ಮತ್ತು ಗ್ರಾ.ಪಂ ಸದಸ್ಯರಿಗೆ ಏಳು ಸಾವಿರ ಸಂಬಳವಿದೆ ಎಂದರು. ಇತರೆ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕದಲ್ಲಿ ಗ್ರಾ.ಪಂ ಸದಸ್ಯರಿಗೆ ಸೌಲಭ್ಯಗಳು ಕಡಿಮೆ ಇವೆ. ಹೀಗಾಗಿ ಗ್ರಾ.ಪಂ ಸದಸ್ಯರಿಗೆ ಉಚಿತ ಬಸ್ ಪಾಸ್ ಗಾಗಿ ಪ್ರಯತ್ನ ನಡೆದಿದೆ ಎಂದರು. ಗ್ರಾ.ಪಂ ಸದಸ್ಯರ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಶಾಸಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಉದ್ದೇಶವಿದ್ದು ಬರುವ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಚರ್ಚಿಸಿ ಸದಸ್ಯರ ಸೌಲಭ್ಯಕ್ಕೆ ಸ್ಪಂದಿಸುವದಾಗಿ ತಿಳಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ಸ್ಥಳಿಯ ಸಂಸ್ಥೆಗಳಿಗೆ ಅರ್ಥಿಕ ಶಕ್ತಿ ತುಂಬುವ ಕೆಲಸ ಮಾಡಬೇಕು ಮತ್ತು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಾದ ಜಿ.ಪಂ ಮತ್ತು ತಾ.ಪಂ ಗೆ ಚುನಾವಣೆ ಮಾಡುವ ಮೂಲಕ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ಆಗುವ ಅವಶ್ಯಕತೆ ಇದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ, ಇಒ ನಂದೀಪ ರಾಠೋಡ ಮತ್ತು ರೂಗಿ ಪಿಡಿಒ ಬಸವರಾಜ ಬಬಲಾದ ಮಾತನಾಡಿದರು.
ವೇದಿಕೆಯ ಮೇಲೆ ತಹಸೀಲ್ದಾರ ಬಿ.ಎಸ್.ಕಡಕಬಾವಿ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣ , ಜಾವೇದ ಮೋಮಿನ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ,ಭೀಮಣ್ಣ ಕವಲಗಿ, ಹಿರೇಬೇವನೂರ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಜಾಧವ ಮತ್ತಿತರಿದ್ದರು.
ಸಮಾರಂಭದಲ್ಲಿ ಜಿಲ್ಲಾ ಪಿಡಿಒ ಸಂಘದ ಅಧ್ಯಕ್ಷ ಸಿ.ಜಿ.ಪಾರೆ, ತಾಲೂಕಾ ಸಂಘದ ಅಧ್ಯಕ್ಷ ಹಣಮಂತಸಿAಗ ರಜಪೂರ, ಎಸ್.ಡಿ. ಬಿರಾದಾರ , ಜಬ್ಬಾರ ಅಲಿ ಹಳ್ಳಿ ಮತ್ತಿತರಿದ್ದರು.