ರಾಜ್ಯ ಸರಕಾರದ ವಿರುದ್ಧ ಭುಗಿಲೆದ್ದ ಲಿಂಗಾಯತ ಪಂಚಮಸಾಲಿ
ಇಂಡಿ : ಡಿಸೆಂಬರ್ ಹತ್ತರಂದು ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ ೨ಅ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಲಾಠಿ ಪ್ರಹಾರ ನಡೆಸಿ ಅಮಾಯಕ, ರೈತರು ಹಾಗೂ ವಕೀಲರು ಸೇರಿದಂತೆ ಹಲವರ ಮೇಲೆ ಲಾಠಿ ಪ್ರಹಾರ ಮಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮತ್ತು ಬೆಳಗಾವಿಯ ಪೊಲೀಸ್ ಎಡಿಜಿಪಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಗುರುವಾರ ತಾಲ್ಲೂಕಿನ ಸಾತಲಗಾಂವ ಗ್ರಾಮದಲ್ಲಿ ರಸ್ತೆ ತಡೆದು ಟಾಯರ್ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಎಸ್ ಕೆ ಕಾಮಗೊಂಡ, ಎಸ್ ಎಸ್ ಬಿರಾದಾರ, ನೀಲಕಂಠ ಬಿರಾದಾರ, ಶಂಕರಗೌಡ ಬಿರಾದಾರ, ಸಂಗಪ್ಪ ಹೊಸೂರ, ಈರಣ್ಣ ಕಣದಾಳ, ಸೊಮು ಬಿರಾದಾರ, ಶಾಮ ವಿಭೂತಿ, ಮಲ್ಲು ನಿಂಬರಗಿ, ಎಸ್ ಎಸ್ ಹಿರೇಮಠ, ಎಸ್ ಎಸ್ ಮಡಗೊಂಡ, ರಮೇಶ್ ಬಿರಾದಾರ, ವಿಠೋಬಾ ಮಡಗೊಂಡ, ರೇವಣಸಿದ್ದ ಬಿರಾದಾರ, ರಾಜು ಬಿರಾದಾರ, ಮಲ್ಲು ಗುಂಜಟ್ಟಿ, ಸಿದ್ದು ಬಿರಾದಾರ, ಮಹೇಶ್ ಬಿರಾದಾರ, ಕಾಂತು ಮಾಶ್ಯಾಳ, ಸಾಹೇಬಗೌಡ ಬಿರಾದಾರ, ಶೀವಣ್ಣ ಗುಂಜಟ್ಟಿ, ಶಿವಯೋಗೆಪ್ಪ ಕಣದಾಳ, ಶೂಶೃತ್ ಪಾಟೀಲ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.