ಜನಸಾಮಾನ್ಯರ ಬದುಕಿಗೆ ಬೆಳಕಾದ ತಡವಲಗದ ಮರುಳಸಿದ್ದರು-ಡಾ.ಇಂಡಿ
ಇಂಡಿ: ಘನ ವ್ಯಕ್ತಿತ್ವ ಹೊಂದಿದ್ದ ತಡವಲಗ ಮರುಳಸಿದ್ದರು
ಜನಮನದಲ್ಲಿ ಸಾಮಾಜಿಕ, ಧಾರ್ಮಿಕ ಚಿಂತನೆಗಳನ್ನು ತಮ್ಮ
ಪ್ರವಚನ ಮೂಲಕ ನೀಡಿ, ಸಮನ್ವಯತೆಯಿಂದ ಬದುಕಿಗೆ ದಾರಿ ತೋರಿಸಿದ ಮಹಾತ್ಮರು ಎಂದು ಸಾಹಿತಿ ಡಾ.ಕೆ ಎಂ ಇಂಡಿ ಹೇಳಿದರು.
ಅವರು ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ತಡವಲಗ ಮರುಳಸಿದ್ದರು’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ
ಮಾತನಾಡಿದರು.
ಮನುಕುಲದ ಉದ್ದಾರಕ್ಕಾಗಿ ಅನೇಕ ಪವಾಡಗಳನ್ನು ಮಾಡುತ್ತಾ, ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ, ರೋಗ ರುಜಿನ ಭಾಧಿತರಿಗೆ ಆರೋಗ್ಯ ಪರಿಹಾರಗಳನ್ನು ಕೊಡುತ್ತಾ ಶರಣ ಸಂವಿಧಾನವನ್ನು ಪಾಲಿಸುತ್ತಾ ಬಂದು, ಜನಸಾಮಾನ್ಯರ ಬದುಕಿಗೆ ಬೆಳಕಾದವರು ತಡವಲಗ ಮರುಳಸಿದ್ದರು ಎಂದು ಹೇಳಿದರು.
ತಡವಲಗ ಮರುಳಸಿದ್ದರ ಜಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತಿದ್ದು, ಅಂದಿನಿಂದ ಇಂದಿನವರೆಗೂ ಜನರು
ಪೂಜೆ ಕಟ್ಟಿ ನೋಡಿ ತಮ್ಮ ಮನೆ ನಿರ್ಮಾಣ, ಬೆಳೆ ಬೆಳೆಯುವ ಪದ್ದತಿ ಆರಂಭ ಮಾಡುವ ಪರಂಪರೆ ಚಾಲ್ತಿಯಲ್ಲಿದೆ. ಅವರು ದುಷ್ಟರ ಸಂಹಾರ ಮಾಡುತ್ತಾ, ಶಿಷ್ಟರ ರಕ್ಷಕರಾಗಿದ್ದರು ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಚಿದಂಬರ ಬಂಡಗರ ಮಾತನಾಡಿ,
ರಚನಾತ್ಮಕ ಹಾಗೂ ಕ್ರಿಯಾತ್ಮಕ ಚಿಂತನೆಗಳ ಮೂಲಕ 2021 ರಲ್ಲಿ ಅಸ್ತಿತ್ವಕ್ಕೆ ಬಂದ ನಮ್ಮ ಜಗಲಿ ಕೇಂದ್ರವು ಒಂದು ನಿರ್ಧಿಷ್ಟ ಪ್ರಾದೇಶಿಕತೆಯ ಮೇಲೆ ಆಗುತ್ತಿರುವ ಸಾಂಸ್ಕೃತಿಕ ಅವಹೇಳನದ ವಿರುದ್ಧ ಸೆಟೆದು ನಿಂತ ಮನಸ್ಸುಗಳ ಮೊತ್ತವಾಗಿ ತನ್ನ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಡಿ ಎನ್ ಅಕ್ಕಿ, ಗೀತಯೋಗಿ, ರಾಘವೇಂದ್ರ ಕುಲಕರ್ಣಿ,
ಬಸವರಾಜ ಕಿರಣಗಿ, ಶ್ರೀಧರ ಹಿಪ್ಪರಗಿ, ಬಿ ಸಿ ಭಗವಂತಗೌಡರ, ಸರೋಜಿನಿ ಮಾವಿನಮರ, ರಾಚು ಕೊಪ್ಪ, ವಿದ್ಯಾ ಕಲ್ಯಾಣಶೆಟ್ಟಿ, ನಿಂಗಣ್ಣ ಬಿರಾದಾರ,ರಮೇಶ ಕತ್ತಿ, ಸಂಗನಗೌಡ ಹಚಡದ, ಸುವರ್ಣ ಗುರವ,ರಮ್ಜಾನ್ ನದಾಫ್,ನಿಂಗಣ್ಣ ರೊಳ್ಳಿ ಸೇರಿದಂತೆ ಅನೇಕರು
ಭಾಗವಹಿಸಿದ್ದರು.
ಶಿಕ್ಷಕ ವೈ ಜಿ ಬಿರಾದಾರ ಸ್ವಾಗತಿಸಿ,ಪರಿಚಯಿಸಿದರು. ಶಿಕ್ಷಕ ಸಂತೋಷ ಬಂಡೆ ನಿರೂಪಿಸಿದರು.