ಬಸವನಬಾಗೇವಾಡಿ: ಬಸವನಬಾಗೇವಾಡಿಯಲ್ಲಿ ಲಘು ಭೂಕಂಪನವಾಗಿ ಜನರು ಭೀತಿಗೊಂಡ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಕಳೆದ ರಾತ್ರಿ 1-53 ಕ್ಕೆ ಲಘು ಭೂಕಂಪನದ ಅನುಭವಾಗಿ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದ ಬಡಾವಣೆಯಲ್ಲಿ ಒಂದು ಸೆಕೆಂಡಿನಷ್ಟು ಭೂಮಿ ಕಂಪನವಾಗದೆ. ಮನೆಯ ಹೊರಗಡೆ ಮಲಗಿದ್ದ ಜನರು ಗಾಬರಿಗೊಂಡಿದ್ದರು. ಇನ್ನು ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.