ಗ್ರಂಥಾಯಲಗಳು ದೇವಾಲಯಗಳಿದ್ದಂತೆ : ಎಮ್.ಕೆ.ಬಿರಾದಾರ
ಇಂಡಿ: ಗ್ರಂಥಾಯಲಗಳು ದೇವಾಲಯಗಳಿದ್ದಂತೆ. ಹಣವಿದ್ದರೆ ಕಳೆದು ಹೋಗಬಹುದು. ಆದರೆ ಪುಸ್ತಕಗಳಿಂದ ಪಡೆದ ಜ್ಞಾನ ಕಳೆದು ಹೋಗಲು ಸಾಧ್ಯವೇ ಇಲ್ಲ. ಗ್ರಂಥಗಳನ್ನು ಅಧ್ಯಯನ ಮಾಡುವವರು ಮಹೋನ್ನತ ನಾಯಕರಾಗಿ ಬೆಳದ ಉದಾಹರಣೆಗಳು ಸಾಕಷ್ಟಿವೆ ಎಂದು ಚಡಚಣದ ಸಂಗಮೇಶ್ವರ ಕಲಾ ಹಾಗೂ ವಾಣ ಜ್ಯ ಮಹಾವಿದ್ಯಾಲಯ ಗ್ರಂಥಪಾಲಕÀ ಎಮ್.ಕೆ.ಬಿರಾದಾರ ಹೇಳಿದರು.
ಅವರು ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣ ಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಗ್ರಂಥಾಲಯದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಸ್ತಕಕ್ಕಿಂತ ಮತ್ತೊಬ್ಬ ಒಳ್ಳೆಯ ಸ್ನೇಹಿತ ಇರಲು ಸಾಧ್ಯವಿಲ್ಲ. ಪುಸ್ತಕ ಓದುವಿಕೆ ನಿರಂತರವಾಗಿದ್ದರೆ ವ್ಯಕ್ತಿ ಬೌದ್ಧಿಕಾವಗಿಯೂ ಜೀವಂತವಾಗಿರುತ್ತಾನೆ. ಆದರೆ ಇಂದಿನ ಯುವಪೀಳಿಗೆ ಮೊಬೈಲ್ ಸಂಸ್ಕೃತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತ ಓದುವಿಕೆಯಿಂದ ದೂರ ಉಳಿಯುತ್ತಿದೆ. ಇದು ಬೆಸರದ ಸಂಗತಿ ಎಂದರು.
ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ, ಮನುಕುಲದ ಉದ್ಧಾರದಲ್ಲಿ ಪುಸ್ತಕಗಳ ಕೊಡುಗೆ ಅಪಾರ. ಗ್ರಂಥಾಲಯಗಳು ಜ್ಞಾನದ ಕೇಂದ್ರಗಳಾಗಿದ್ದು, ಸಮಾಜದ ಅಂಕುಡೊAಕುಗಳನ್ನು ತಿದ್ದಲು ಹಾಗೂ ಸಮಾಜವನ್ನು ವಸ್ತುನಿಷ್ಠ ಅರಿತು ರಚನಾತ್ಮಕವಾಗಿ ಸಮಾಜ ಕಟ್ಟಲು ಪುಸ್ತಕಗಳು ಗ್ರಂಥಾಲಯಗಳು ಬೇಕಿವೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಹೊರತುಪಡಿಸಿ, ಸಾಹಿತ್ಯ ಸಂಸ್ಕೃತಿ ಹಿನ್ನಲೆಯಲ್ಲಿ ಕೃತಿಗಳನ್ನು ಓದುವವರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಜ್ಞಾನ ವಿಸ್ತಾರಕ್ಕೆ ಪೂರಕವಾದ ಪುಸ್ತಕಗಳನ್ನು ಅಧ್ಯಯನ ಮಾಡಲು ಯುವ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಂಥಾಲಯದ ವತಿಯಿಂದ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು .
ವೈಷ್ಣವಿ ರಾಠೋಡ, ರಾಘವೇಂದ್ರ ಇಂಗನಾಳ, ಡಾ.ಸುರೇಂದ್ರ ಕೆ ಮಾತನಾಡಿದರು.
ಪ್ರಾಧ್ಯಾಪಕರಾದ ಡಾ.ಆನಂದ ನಡವಿನಮನಿ, ಡಾ.ವಿಶ್ವಾಸ ಕೊರವಾರ, ಶ್ರೀಶೈಲ ಸಣ್ಣಕ್ಕಿ, ಡಾ.ಸಿ.ಎಸ್.ಬಿರಾದಾರ, ಡಾ.ಜಯಪ್ರಸಾದ ಡಿ, ಡಾ.ಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ, ಶೃತಿ ಪಾಟೀಲ, ಶ್ವೇತಾ ಕಾಂತ, ಪಂಕಜಾ ಕುಲಕಣ ð, ಶೃತಿ ಬಿರಾದಾರ, ಪರಶುರಾಮ ಅಜಮನಿ, ನಸ್ರೀನ ವಾಲಿಕರ, ಧಾನಮ್ಮ ಪಾಟೀಲ, ಪ್ರಶಾಂತ ಹಿರೇಮಠ, ಆನಂದ ತಾಂಬೆ, ಮಹಾದೇವ ಹಳ್ಳದಮನಿ, ಪ್ರೀತಿ ಘಾಳಿಮಠ, ಜನಾಬಾಯಿ ಪಾರೆಕರ ಮತ್ತಿತರರಿದ್ದರು.
ಇಂಡಿ: ಪಟ್ಟಣದ ಜಿ.ಆರ್.ಗಾಂಧಿ ಕಲಾ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಬಿರಾದಾರ ಮಾತನಾಡಿದರು.