ಬಸವಣ್ಣನವರ ಜೀವನ ನಮಗೆಲ್ಲರಿಗೂ ದಾರಿದೀಪವಾಗಲಿ
ಗುಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಆಚರಣೆ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರಾಗಿ ಘೋಷಣೆ ಮಾಡಿರುವುದು ಸಾರ್ವತ್ರಿಕವಾಗಿ ಸ್ವಾಗತಾರ್ಹ ಎಂದು ಮುಖ್ಯ ಗುರುಗಳಾದ ಸಂಗಮೇಶ ಶಾಂತಪ್ಪ ನವಲಿ ಅವರು ಹೇಳಿದರು.
ತಾಲ್ಲೂಕಿನ ಗುಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿ ಶ್ರೀ ಭೀಮಾಶಂಕರ ದೊಡಮನಿ ರವರು ಮಾತನಾಡಿ ಬಸವಣ್ಣನವರ ಜೀವನ ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶಾಂತಗೌಡ ಮಾಡಗಿ ಹಾಗೂ ಮುಖ್ಯ ಅತಿಥಿಗಳಾಗಿ ವೇದಮೂರ್ತಿಗಳಾದ ಶ್ರೀಶೈಲ ಹಿರೇಮಠ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಭೀಮಾಶಂಕರ ದೊಡಮನಿ ಹಾಗೂ ಅತಿಥಿಗಳಾಗಿ ಎಸ್ಡಿಎಂಸಿ ಸದಸ್ಯರಾದ ಭೀಮನಗೌಡ ದೋರನಳ್ಳಿ ಮತ್ತು ಶಾಲಾ ಮುಖ್ಯ ಗುರು ಸಂಗಮೇಶ ನವಲಿ ಹಾಗೂ ಅತಿಥಿ ಶಿಕ್ಷಕರಾದ ಶ್ರೀಮತಿ ಕಾಶಿಬಾಯಿ ಹಾದಿಮನಿ, ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಶ್ರೀಮತಿ ಕಾಶಿಬಾಯಿ ಹಾದಿಮನಿ ನಿರೂಪಿಸಿದರು ಸಂಗಮೇಶ ಶಾಂತಪ್ಪ ನವಲಿ ಸ್ವಾಗತಿಸಿದರು ಕುಮಾರಿ ನೀಲಮ್ಮ ಬೆಲವಂತರಕಂಠಿ ಪ್ರಾರ್ಥಿಸಿದರು ಸಂಗಮೇಶ ಶಾಂತಪ್ಪ ನವಲಿ ವಂದಿಸಿದರು.