ಬೆಂಗಳೂರು ಮೇ 11: ವಿಶ್ವದಲ್ಲಿ ಪ್ರತಿವರ್ಷ ನೀರು ಸಂಪರ್ಕದಲ್ಲಿನ ಸೋರಿಕೆಯಿಂದಾಗಿ ಬಿಲಿಯನ್ ಲೀಟರ್ ಗಟ್ಟಲೆ ನೀರು ಪೋಲಾಗುತ್ತಿದೆ. ಅಧ್ಯಯನಗಳ ಪ್ರಕಾರ, ಒಂದು ಸೋರಿಕೆಯ ಸಂಪರ್ಕದಿಂದ ಪ್ರತಿ ಸೆಕೆಂಡಿಗೆ ಒಂದು ಹನಿ ನೀರು ವ್ಯರ್ಥವಾಗುವ ಮೂಲಕ ವರ್ಷಕ್ಕೆ 7,800 ಲೀಟರ್ ನಷ್ಟು ನೀರು ವ್ಯರ್ಥವಾಗುತ್ತಿದೆ!
ಈ ಸಮಸ್ಯೆಯನ್ನು ಪರಿಹರಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ಸಾಕಷ್ಟು ಜನರು ತಿಳುವಳಿಕೆಯ ಕೊರತೆಯಿಂದಾಗಿ ಈ ಬಗ್ಗೆ ಗಮನಹರಿಸುತ್ತಿಲ್ಲ.
ಇದೊಂದು ಎಚ್ಚರಿಕೆ ಗಂಟೆಯಾಗಿರುವ ಹಿನ್ನೆಲೆಯಲ್ಲಿ GROHE ಇಂಡಿಯಾ ನೀರಿನ ಸಂರಕ್ಷಣೆಯಲ್ಲಿ ಹೊಸ ಉಪಕ್ರಮವನ್ನು ಕೈಗೊಳ್ಳಲು ಕಾರಣವಾಗಿದೆ. ಮೈಗೇಟ್ ಸಹಯೋಗದಲ್ಲಿ ಭಾರತೀಯ ಭದ್ರತೆ ಮತ್ತು ಸಮುದಾಯ ನಿರ್ವಹಣಾ ಅಪ್ಲಿಕೇಶನ್ ಮೂಲಕ GROHE ನೀರಿನ ವ್ಯರ್ಥದ ಬಗ್ಗೆ ಜಾಗೃತಿ ಮೂಡಿಸಲು ಈ ಉಪಕ್ರಮವನ್ನು ಜಾರಿಗೊಳಿಸುತ್ತಿದೆ. ಇದರಡಿ ಬೆಂಗಳೂರಿನಾದ್ಯಂತ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ನಲ್ಲಿಗಳು ಮತ್ತು ಶಾವರ್ ಗಳನ್ನು ಸರಿಪಡಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.
GROHE ರೋವರ್ ನೆರವಿನಿಂದ ಪ್ರದರ್ಶನ ಮತ್ತು ಡೆಮೋ ವಾಹನವನ್ನು ಸಿದ್ಧಪಡಿಸಲಾಗಿದ್ದು, ತಂತ್ರಜ್ಞರನ್ನೊಳಗೊಂಡ GROHE ತಂಡವು ಬೆಂಗಳೂರು ನಗರದಾದ್ಯಂತ ಸಂಚರಿಸಿ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಸೋರಿಕೆಯಾಗುತ್ತಿರುವ ನಲ್ಲಿಗಳ ದುರಸ್ತಿ ಮತ್ತು ಸೋರಿಕೆಗೆ ಕಾರಣವಾಗುವ ಪ್ಲಂಬಿಂಗ್ ಕೆಲಸಗಳನ್ನು ಉಚಿತವಾಗಿ ಮಾಡಿಕೊಡಲಿದ್ದಾರೆ.
ಈ ಅಭಿಯಾನದ ಮೂಲಕ GROHE ಅನೇಕ ಮನೆಗಳಿಗೆ ಭೇಟಿ ನೀಡಿ ಸೋರಿಕೆಯನ್ನು ತಡೆಗಟ್ಟುವ ಮೂಲಕ ವಾರ್ಷಿಕ ಮಿಲಿಯನ್ ಗಟ್ಟಲೆ ನೀರನ್ನು ಉಳಿತಾಯ ಮಾಡುವಲ್ಲಿ ನೆರವಾಗಲಿದೆ.
ಸುಸ್ಥಿರ ನೀರು ಸಂರಕ್ಷಣೆ ಮತ್ತು ಪರಿಸರ ಕಾಳಜಿಯು ಪ್ರಾಮುಖ್ಯತೆ ಮತ್ತು ಪ್ರಸ್ತುತೆಯನ್ನು ಪಡೆದುಕೊಳ್ಳುತ್ತಿದೆ. ಈ ಕಾಳಜಿ ಕೇವಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅಂದರೆ, ಬಿಲ್ಡರ್ ಗಳು, ಗುತ್ತಿಗೆದಾರರು, ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರಲ್ಲಿ ಮಾತ್ರವಲ್ಲ. ಎಲ್ಲರಲ್ಲೂ ಇದೆ. GROHE ನಲ್ಲಿ ಸುಸ್ಥಿರತೆಯು ಒಂದು ಪ್ರಮುಖ ಸ್ತಂಭವಾಗಿದ್ದು, ಅದರ ಪ್ರಕಾರವೇ ತನ್ನ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಬರುತ್ತಿದೆ. GROHE ಜಾಗತಿಕ ಬಾತ್ ರೂಂ ಬ್ರ್ಯಾಂಡ್ ಆಗಿದ್ದು, ತನ್ನ ಬಳಕೆದಾರರ ಮನೆಗಳಿಗೆ ನೀರು ಉಳಿತಾಯ ಉತ್ಪನ್ನಗಳೊಂದಿಗೆ ಶಿಕ್ಷಣ ಮತ್ತು ಸಜ್ಜುಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಈ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವನ್ನು ಸಂರಕ್ಷಣೆ ಮಾಡಲು ಸಹಾಯ ಮಾಡುತ್ತೇವೆ.
To book a demo visit by the GROHE Rover, please contact: +91 8068972333,
Email: india.directsales@lixil.com