ಕಾಂಗ್ರೆಸ್ ಬಿಜೆಪಿ ಪಕ್ಷ ತೊರೆದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು :ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪೆದ್ದನ ಪಾಳ್ಯ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನೂರಾರು ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಶಾಸಕ ಎಂಆರ್ ಮಂಜುನಾಥ್ ನೇತೃತ್ವದಲ್ಲಿ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನ ಗಡಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಜೊತೆಗೆ ಇಲ್ಲಿನ ರೈತಪಿ ವರ್ಗದವರಿಗೆ ಸಮರ್ಪಕವಾದ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಹಾಗೂ ಪಾಲಾರ್ ನದಿಯಿಂದ ಮಿನತ್ ಹಳ್ಳ ಜಲಶಯಕ್ಕೆ ಈತ ನೀರಾವರಿ ಮೂಲಕ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಮುಂದಿನ ದಿನಗಳಲ್ಲಿ ಯೋಜನೆಯನ್ನು ರೂಪಿಸಲಾಗಿದೆ ಇಲ್ಲಿನ ನಾಲೆಗಳ ರಾಡಿ ಮತ್ತು ಗಿಡಗಂಟಿ ತೆರವುಗೊಳಿಸಿ ರೈತಾಪಿ ವರ್ಗದವರ ಹಿತ ಕಾಯುವ ಆರ್ಥಿಕ ಸದೃಢ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಪಾಲಾರ್ ನದಿಯಿಂದ ಮಿನ್ಯತ್ ಹಳ್ಳ ಜಲಶಯಕ್ಕೆಏತ ನೀರಾವರಿ ಮೂಲಕ ರೈತಾಪಿ ವರ್ಗದವರಿಗೆ ಗಡಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾಕನಪಾಳ್ಯ ಸೇತುವೆ ನಿರ್ಮಾಣಕ್ಕೆ ಕ್ರಮ : ಗಡಿ ಭಾಗದಿಂದ ಗುಡ್ಡೆಯುವರು ಮೂಲಕ ಮಾಕನಪಾಳ್ಯ ಮೂಲಕ ತಮಿಳುನಾಡಿನ ಸತ್ಯಮಂಗಲಕ್ಕೆ ತೆರಳಲು ಸೇತುವೆ ನಿರ್ಮಾಣ ಮಾಡಲು ಅಲ್ಲಿನ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಮನವಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಈ ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಇಲ್ಲಿನ ಜನತೆಗೆ ತಮಿಳುನಾಡಿನ ಸಂಪರ್ಕದ ಜೊತೆಗೆ ದೂರ ಸಹ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು
ವಿವಿಧ ಪಕ್ಷಗಳ ಮುಖಂಡರುಗಳ ಸೇರ್ಪಡೆ ಪಕ್ಷಕ್ಕೆ ಬಲ : ಗಡಿ ಗ್ರಾಮಗಳ ಜನಪ್ರತಿನಿಧಿಗಳ ಇಚ್ಚ ಶಕ್ತಿ ಕೊರತೆಯಿಂದ ವಿವಿಧ ಪಕ್ಷಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ವಿವಿಧ ಪಕ್ಷದ ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಬಲ ಬಂದಿದೆ ಹೀಗಾಗಿ ನನ್ನ ನಂಬಿ ಬಂದಿರುವ ಜನತೆಗೆ ಈ ಭಾಗದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಬಿಜೆಪಿ ಪಕ್ಷದ ಮುಖಂಡರುಗಳ ಸೇರ್ಪಡೆ : ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುರುಗೇಶ್ಪುರಿ ಸೇರಿದಂತೆ ನೂರಾರು ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಶಾಲು ಹೊದಿಸಿ ಗೌರವಿಸಿ ಸೇರ್ಪಡೆಗೊಂಡರು ಇದೇ ವೇಳೆಯಲ್ಲಿ ಮುಖಂಡರುಗಳಾದ ಭದ್ರಯ್ಯ ಈರಣ್ಣ ಮುರುಗ ಗಣೇಶ್ ಮಾದೇಶ್ ತಮ್ಮಯ್ಯಪ್ಪ ಗೋವಿಂದ ನಾಗಣ್ಣ ನಾಗವೇಣಿ ರೋಜಾ ಮಹೇಶ್ ಮುನಿಯಪ್ಪ ಧನಪಾಲ ಶಿವಕುಮಾರ್ ರಾಜೇಶ್ ಸಿದ್ದಮರಿ ಸೇರಿದಂತೆ ನೂರಾರು ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಗುರುಮಲ್ಲಪ,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ,ಡಿ.ಆರ್ ಹಾರ್ಡ್ವರ್ ಸಿನಪ್ಪ,ಡಿಕೆ ರಾಜು, ನಟರಾಜು, ಹುಚ್ಚಯ್ಯ, ತಂಗವೇಲು ನಾಗಪ್ಪ, ಮಾಣಿಕ್ಯ,ಗೋಪಾಲ್ ನಾಯಕ,ಎಸ್ ಆರ್ ಮಹದೇವ್,ಹನೂರು ಗೋವಿಂದ, ಶಿವಣ್ಣ, ನಾಗರಾಜ್,ವಿಜಯ್ ಕುಮಾರ್,ಮುನೇಶ್,
ರಾಜೇಂದ್ರ,ರಾಮು,ಮುರುಗೇಶ್ ಹಾಗೂ ಇನ್ನು ಮುಂತಾದವರು ಹಾಜರಿದ್ದರು.