ನ್ಯಾಯವಾದಿ ಸಿದ್ದಣ್ಣ ಬೂದಿಹಾಳ ಅವಿರೋಧ ಆಯ್ಕೆ..!
ಇಂಡಿ: ತಾಲೂಕಿನ ಅಹಿರಸಂಘ ಗ್ರಾಮದ ಭೂದೇವಿ ಕಬ್ಬು ಬೆಳೆಯುವವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ
ಉಪಾಧ್ಯಕ್ಷರ ಚುನಾವಣೆ ಸೋಮವಾರ ರಂದು ಅವಿರೋಧವಾಗಿ ಜರುಗಿತು.
ಸಂಘದ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಸಿದ್ದಣ್ಣ ಬೂದಿಹಾಳ, ಉಪಾಧ್ಯಕ್ಷರಾಗಿ ಶ್ರೀಮಂತ ಕಂಬಾರ ಈ ಇಬ್ಬರೂ ಎರಡೂ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರೆಂದು
ಚುನಾವಣಾಧಿಕಾರಿ ಕಲ್ಲನಗೌಡ ಪಾಟೀಲ್ ಘೋಷಿಸಿದರು. ತದನಂತರ ಅಧ್ಯಕ್ಷರಾಗಿ ಆಯ್ಕೆಯಾದ
ಸಿದ್ದಣ್ಣ ಬೂದಿಹಾಳ್, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಶ್ರೀಮಂತ ಕಂಬಾರ ಅವರಿಗೆ ಚುನಾವಣಾಧಿಕಾರಿಗಳು ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಸಿದ್ದಣ್ಣ ಬೂದಿಹಾಳ ಈ
ಸಂಘ ಸುಮಾರು 50 ವರ್ಷಗಳ ಹಿಂದೆಯೇ
ಸ್ಥಾಪನೆಯಾಗಿದ್ದು, ನಾನು ಈ ಸಂಘಕ್ಕೆ ಸತತ
25 ವರ್ಷಗಳ ಕಾಲ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದೇನೆ. ಇಲ್ಲಿನ ರೈತರ ಸಹಾಯ ಸಹಕಾರದಿಂದ ಹಾಗೂ ನಿರ್ದೇಶಕರ ಪ್ರಾಮಾಣಿಕ ಪ್ರಯತ್ನದಿಂದ ಈ
ಸಂಘ ಪ್ರತಿ ವರ್ಷವೂ ಲಾಭದಲ್ಲಿ ಮುನ್ನಡೆಯುತ್ತಿದೆ, ಸಂಘದಿಂದ ರೈತರಿಗೆ ಸಾಕಷ್ಟು ಸಾಲ ನೀಡಿ ಮರುಪಾವತಿ
ಮಾಡಿಕೊಳ್ಳಲಾಗಿದೆ, ಅಲ್ಲದೆ ಸಂಘದ ಕಾರ್ಯ – ನಿರ್ವಹಣೆ ಕಂಡು ವಿಜಯಪುರ ಜಿಲ್ಲಾ ಡಿಸಿಸಿ ಬ್ಯಾಂಕ್‍ನಿಂದ ಮೂರು ಬಾರಿ ಅತ್ಯುತ್ತಮ ಸಹಕಾರಿ ಸಂಘ ಎಂದು ಪ್ರಶಸ್ತಿ ಸಹ ಲಭಿಸಿದೆ. ರೈತರ ಸಹಕಾರದಿಂದ ಈ ಸಂಘ ಉನ್ನತಿಯತ್ತ ಸಾಗುತ್ತಿದ್ದು, ನನಗೆ ಮರಳಿ ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದರಿಂದ ಸಂಘದ ಬೆಳವಣಿಗೆಗೆ ಇನ್ನಷ್ಟು ಹೆಚ್ಚು ಸಮಯ ನೀಡಿ ಅಭಿವೃದ್ಧಿಗೊಳಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ನಿರ್ದೇಶಕರಾದ ನಂದಕುಮಾರ್ ಬ್ಯಾಗೆಳ್ಳಿ, ನಿಂಗನಗೌಡ ಬಿರಾದಾರ, ಸಿದ್ದಪ್ಪ ಗೋಡಿಹಾಳ,
ಶ್ರೀಮಂತ ಕಂಬಾರ, ಕಸ್ತೂರಿಬಾಯಿ ಕುದುರಿ, ಶೋಭಾ
ಇಂಗಳಗಿ, ಸಿದ್ದಪ್ಪ ಪೂಜಾರಿ, ಅಣ್ಣಪ್ಪ ಹಳಗುಣಕಿ,
ನೀಲಾಬಾಯಿ ಕೊಡವನ್ನ, ರಾಜಕುಮಾರವಾಲಿಕಾರ, ಅಬ್ಬಾಸಲಿ ಶಾಮನವರ ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಾಂತ್
ಬಿರಾದಾರ ಉಪಸ್ಥಿತರಿದ್ದರು.
ಇಂಡಿ: ತಾಲೂಕಿನ ಅಹಿರಸಂಘ ಗ್ರಾಮದ ಭೂದೇವಿ ಕಬ್ಬು ಬೆಳೆಯುವವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ
ಉಪಾಧ್ಯಕ್ಷರ ಚುನಾವಣೆ ಸೋಮವಾರ ರಂದು ಅವಿರೋಧವಾಗಿ ಜರುಗಿತು.