ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ; ಅಹವಾಲು ಸ್ವೀಕಾರ
ವಿಜಯಪುರ: ನಗರದ ವಾರ್ಡ ನಂ.9 ರಲ್ಲಿ ಬರುವ ರಾಮ ಮಂದಿರ ಮುಖ್ಯ ರಸ್ತೆಯಿಂದ ಎಸ್.ಎಸ್.ಕಾಂಪ್ಲೆಕ್ಸ್ ಮೂಲಕ ಸಂಗೀತ ಮೊಬೈಲ್ ಸೆಂಟರ್ ವರೆಗೆ ರೂ.30 ಲಕ್ಷ ಅನುದಾನದಲ್ಲಿ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆ ಬಳಿಕ ಶಾಸಕರು ನೆರೆದ ಸಾರ್ವಜನಿಕರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ವಿಠ್ಠಲ ಹೊಸಪೇಟ, ಮುಖಂಡರಾದ ಸದಾಶಿವ ಗುಡ್ಡೋಡಗಿ, ಡಿ.ಎಸ್.ಪಾಟೀಲ, ಪ್ರವೀಣ ಕರಡಿ, ಈರಪ್ಪ ಇಲಕಲ್ಲ ಸೇರಿದಂತೆ ಮತ್ತಿತರರು ಇದ್ದರು.


















