ಇಂಗಳಗಿಯಲ್ಲಿ ಪಾಂಡುರಂಗನಿಗೆ ಲಕ್ಷ ತುಳಸಿ ಅರ್ಚನೆ
ಇಂಡಿ: ಪ್ರತಿ ವರ್ಷದಂತೆ ಶ್ರಾವಣ ತಿಂಗಳ ಏಕಾದಶಿಯಂದು ತಾಲೂಕಿನ ಇಂಗಳಗಿ ಗ್ರಾಮದ ವಿಠಲ ರುಕ್ಮಿಣಿ ದೇವರಿಗೆ ಊರಿನ ಗುರು ಹಿರಿಯರೆಲ್ಲರೂ ಸೇರಿ ಲಕ್ಷ ತುಳಸಿ ಅರ್ಚನೆ ಮಾಡಿದರು.
ಐದು ವರ್ಷಗಳ ಹಿಂದೆ ಗ್ರಾಮದಲ್ಲಿ ಪ್ರತಿಷ್ಠಾಪಿತವಾದ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿಂದು ಮಾಣಿಕರಾವ ಕೃಷ್ಠಾಣಾಜಿ ಕುಲಕರ್ಣಿ, ಯರಗಲ್ಲದ ರಾಮರಾವ ಕುಲಕರ್ಣಿ, ಆನಂದ ಕುಲಕರ್ಣಿಯವರ ನೇತೃತ್ವದಲ್ಲಿ ಲಕ್ಷ ತುಳಸಿ ಅರ್ಚನೆ ಕಾರ್ಯ ನಡೆಯಿತ್ತು.
ಊರಿನ ಗುರು ಹಿರಿಯರ ಮುಖಂಡತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಠಲ ಜಾದವ,ನಾಥು ಜಾದವ,ಬಸು ಜಾದವ, ರಾಜು ಜಾದವ, ಅಶೋಕ ತಡಲಗಿ, ರಾಘವೇಂದ್ರ ಕುಲಕರ್ಣಿ, ಉಮೇಶ ಕುಲಕರ್ಣಿ ಹಾಗು ಇಂಗಳಗಿ ಗ್ರಾಮಸ್ಥರು ಭಕ್ತಿ ಭಾವದಿಂದ ಪಾಲ್ಗೊಂಡಿದರು.
ಸಾಯಂಕಾಲ ಯರಗಲ್ಲದ ರಾಮರಾವ ಕುಲಕರ್ಣಿಯವರಿಂದ ಪ್ರವಚನ,ದ್ವಾದಸಿ ಬೆಳ್ಳಿಗೆ ಪೂಜೆ, ಅಲಂಕಾರ, ತೀರ್ಥ ಪ್ರಸಾದ ಜರಗುವುದು.