ಲಚ್ಯಾಣ: ಟಾಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ
ಲಚ್ಯಾಣ : ರಾಜ್ಯ ಸರಕಾರದ ವಿರುದ್ಧ ಲಿಂಗಾಯತ ಪಂಚಮಸಾಲಿ ಆಕ್ರೋಶ
ಇಂಡಿ: ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ೨ಎ ಮೀಸಲಾತಿಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮುದಾಯದ ಸಾಮನ್ಯ ಹಾಗೂ ವಕೀಲರ ಮೇಲೆ ಪೋಲಿಸರು ಏಸಗಿರುವ ದೌರ್ಜನ್ಯ ಖಂಡಿಸಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಗುರುವಾರದಂದು ಕೆಲಕಾಲ ರಸ್ತೆ ತಡೆದು, ಟಾಯರ್ಗೆ ಬೆಂಕಿ ಹಚ್ಚಿ ಸರಕಾರದ ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಎಂ.ಎಸ್. ಮುಜಗೊಂಡ, ವಿಠ್ಠಲ ಬಾಬುಳಗಿ, ಅಶೋಕಗೌಡ ಪಾಟೀಲ, ಶಿವಾನಂದ ಬಿರಾದಾರ, ಸಂಗನಬಸವ ಬಿರಾದಾರ, ಮಲಕಣ್ಣಾ ಗುಬ್ಯಾಡ, ಶಂಕರಗೌಡ ಬಿರಾದಾರ, ಈರಣ್ಣ ಮುಜಗೊಂಡ, ಎಸ್.ಪಿ. ಮುಜಗೊಂಡ, ಸಂತೋಷ ಸಂಭಾಜಿ, ರಾಜಶೇಖರ ವಾಡಿ, ಈರಣ್ಣ ಕರಾಳೆ ಸೇರಿದಂತೆ ಹಲವು ಜನರು ಭಾಗವಹಿಸಿದ್ದರು.


















