ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ
ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಿತ್ಯ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ
ಆಯೋಜಿಸಲಾಗಿದೆ.ಕಳೆದ ದೀಪಾವಳಿ ಅಮಾವಾಸ್ಯೆಯ ದಿನದಿಂದ ಆರಂಭವಾಗಿ ಬರುವ ಛಟ್ಟಿ ಅಮಾವಾಸ್ಯೆಯ ವರೆಗೆ ನಿತ್ಯ ಸಂಜೆ ಜರುಗುವ, ಈ ಕಾರ್ಯಕ್ರಮದಲ್ಲಿ ಈಚೆಗೆ ಸ್ಥಳೀಯ ಶ್ರೀ ಸಂಗನಬಸವೇಶ್ವರ ಐಟಿಐ ಕಾಲೇಜು, ಸರ್ಕಾರಿ ಪಿಯು ಕಾಲೇಜು, ಬಿ.ಎಲ್.ಡಿ.ಇ. ಸಂಸ್ಥೆಯ ಕೃಷಿ ಮಾದ್ಯಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ
ನೂರಾರು ತೈಲದ ದೀಪ ಬೆಳಗಿ ಸಂಭ್ರಮಿಸಿದರು.
ಈ ನಿಮಿತ್ಯ ಬೆಳಿಗ್ಗೆ ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾ
ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ವಿದ್ಯಾರ್ಥಿಗಳು, ಸಂಜೆ ವೇಳೆಯಲ್ಲಿ ಸಾಮೂಹಿಕವಾಗಿ ಕಮರಿಮಠದ ಆವರಣದಲ್ಲಿ ಮಣ್ಣಿನ ಪಣತೆಯಲ್ಲಿ ದೀಪ ಬೆಳಗಿ ಶ್ರೀ ಸಿದ್ಧಲಿಂಗ ಮಹಾರಾಜರು, ಓಂ ಎಂಬ ಅಕ್ಷರ ಬೆಳಕಿನ ಚಿತ್ತಾರ ತೆಗೆದು ನೋಡುಗರ ಕಣ್ಮನಸೆಳೆದರು. ಈ ಕಾರ್ಯಕ್ರಮದಲ್ಲಿ ಚಿಣ್ಣರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಬೆಳಗಿ, ಪೂಜೆ ಸಲ್ಲಿಸಿ ಪ್ರಸಾದ ಸ್ವಿಕರಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಸುತ್ತಲ
ಲೋಣಿ. ಕೆ.ಡಿ, ಬರಗುಡಿ, ಆಳೂರ, ಅಹಿರಸಂಗ,
ಪಡನೂರ ಗ್ರಾಮದ ಭಕ್ತರು ಶಾಲಾ ವಿದ್ಯಾರ್ಥಿಗಳು
ಪಾಲ್ಗೊಂಡು ಪುನೀತರಾದರು.