ಸಿದ್ದಲಿಂಗ ಮಹಾರಾಜರಿಂದ ಕೃತಾರ್ಥರಾದವರು
ಅಸಂಖ್ಯಾತ – ಶಾಸಕ ಯಶವಂತರಾಯಗೌಡ.
ಇಂಡಿ : ಸಿದ್ದಿಪುರುಷ ಸಿದ್ದಲಿಂಗ ಮಹಾರಾಜರ ಉಪದೇಶ ಪಡೆದು ಕೃತಾರ್ಥರಾದವರು ಅಸಂಖ್ಯಾತ ಜನ. ಅವರಲ್ಲಿ ಸನ್ಯಾಸ ದೀಕ್ಷೆ ಪಡೆದು ಗುರು ಸಿದ್ದಲಿಂಗ ಮಹಾರಾಜರ ಹೆಸರನ್ನು ಸಾರಿದವರು ಮುಗಳಖೋಡದ ಯಲ್ಲಾಲಿಂಗ ಮಹಾರಾಜರು,ಹಿರೇರೂಗಿ ಬೊಳೆಗಾಂವದ
ಬಸವಲಿಂಗ ಶರಣರು, ಗಿರಿಜಮ್ಮತಾಯಿಯವರು, ಪುಣೆ ಮತ್ತು ಕೃಷ್ಣಾ ಮಠದ ಕ್ಷೀರಾಲಿಂಗ ಮಹಾರಾಜರು, ಆಹೇರಿಯ ಆತ್ಮಾನಂದ ಶ್ರೀಗಳು,ಕೆಂಭಾವಿಯ ಹಣಮಂತ ಮಹಾರಾಜರು, ಮದರಖಂಡಿಯ ಸಿದ್ದಲಿಂಗ
ಮಹಾರಾಜರು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಲಚ್ಯಾಣದ ಮಠದಲ್ಲಿ ಶ್ರೀಸಿದ್ದಲಿಂಗ
ಮಹಾರಾಜರ 96ನೇ ಪುಣ್ಯರಾಧನೆ ನಿಮಿತ್ಯ ಶರಣರ
ದರ್ಶನ ಪ್ರವಚನ ಕಾರ್ಯಕ್ರದಲ್ಲಿ ಭಾಗವಹಿಸಿ
ಮಾತನಾಡಿದರು. ಬರುವ 2027ರಲ್ಲಿ ಮುಖ್ಯ ಮಂತ್ರಿ
ಸಿದ್ದರಾಮಯ್ಯ ಹಾಗೂ ವಿವಿಧ ಪ್ರಮುಖ
ಸಚಿವರುಗಳನ್ನು ನಾಡಿನ ಶರಣರನ್ನು ,ಸಾಧು ಸಂತರನ್ನು ಕರೆಯಿಸಿ ಶ್ರೀ ಸಿದ್ದಲಿಂಗ ಶ್ರೀಗಳ ಪುಣ್ಯಸ್ಮರಣೆಯ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸುವದಾಗಿ ಹೇಳಿದರು. ದಿವ್ಯಸಾನಿಧ್ಯವಹಿಸಿದ ಇಲಕಲ್ ಗುರುಮಹಾಂತ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು. ಬಂಥನಾಳದ ವೃಷಭಲಿಂಗ ಮಹಾಸ್ವಾಮಿಗಳು, ಅಗರಖೇಡದ ಅಭಿನವ ಪ್ರಭುಲಿಂಗ
ಮಹಾಶಿವಯೋಗಿಗಳು,ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯವಹಿಸಿದರು.
ಶರಣರ ದರ್ಶನ ಪ್ರವಚನವನ್ನು ಅನುಸುಯ್ಯಾ ಮಹಾತಾಯಿ 12ನೇ ಶತಮಾನದ ಶಿವಶರಣೆ, ಅಕ್ಕಮಹಾದೇವಿ, ನೀಲಾಂಬಿಕೆ, ಆಯದ್ದಕ್ಕಿ ಲಕ್ಕಮ್ಮ ಇತರೆ ಶಿವಶರಣೆಯರ ನಡೇದು ಬಂದ ದಾರಿ ಪ್ರವಚನ ಮೂಲಕ ಹೇಳಿದರು.
ಇದೇ ವೇಳೆ ಶ್ರೀಮಠದಲ್ಲಿ ಕಲಿತು ಇಂಡಿಯ ಕಂದಾಯ ಉಪವಿಭಾಗಾಧಿಕಾರಿಯಾದ ಅಬೀದ್ ಗದ್ಯಾಳ ಇವರನ್ನು ಸನ್ಮಾನಿಸಲಾಯಿತು.