ಕಣ್ಣುಗಳು ಮತ್ತು ದೃಷ್ಠಿಗೆ ಹೆಚ್ಚಿನ
ಪ್ರಾಮುಖ್ಯತೆ ಇದೆ. – ಡಾ. ವೃಷಭಲಿಂಗೇಶ್ವರ
ಶ್ರೀಗಳು.
ಇಂಡಿ : ಮಾನವನಿಗೆ ಜೀವನದಲ್ಲಿ ಕಣ್ಣುಗಳು ಮತ್ತು
ದೃಷ್ಠಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮತ್ತು ಇದು
ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖಪಾತ್ರವನ್ನು ವಹಿಸುತ್ತವೆ ಎಂದು ಪರಮಪೂಜ್ಯ ವೃಷಭಲಿಂಗೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಸಿದ್ಧಲಿಂಗ
ಮಹಾರಾಜರ 96ನೇ ಪುಣ್ಯಾರಾಧನೆಯ ಅಂಗವಾಗಿ
ಲಚ್ಯಾಣ ಹಾಗೂ ಅಗರಖೇಡದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿಜಯಪುರದ ಡಾ|| ಪ್ರಭುಗೌಡ ಪಾಟೀಲ ಇವರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿಮಾತನಾಡುತ್ತಿದ್ದರು.
ಹೂವಿನ ಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮನವರು,
ನಿವೃತ ಪ್ರಾಚಾರ್ಯಎ.ಪಿ.ಕಾಗವಾಡಕರ,ಅಗರಖೇಡ ಸರಕಾರಿ ಆಸ್ಪತ್ರೆಯ ಡಾ|| ಅನೀಲ ರಾಠೋಡ, ತಡವಲಗಾದ ಡಾ|| ಕೃಷ್ಣಾ ಜಾಧವ, ಡಾ|| ಮಮದಾಪುರ, ಅಂಬಲಗಿ, ಅರವಿಂದ ಮೇತ್ರಿ, ವಿಜಯಪುರ ಅನುಗ್ರಹ
ಆಸ್ಪತ್ರೆಯ ಡಾ|| ಸಂಗಮೇಶ ಪಾಟೀಲ, ಡಾ|| ಕೊಟ್ಯಾಳ ಮಾತನಾಡಿದರು.
ಅಗರಖೇಡದ ಅಭಿನವ ಪ್ರಭುಲಿಂಗೇಶ್ವರ ಶ್ರೀಗಳು, ಗ್ರಾ.ಪಂ ಅಧ್ಯಕ್ಷೆ ಕಲ್ಲವ್ವ ಬಿರಾದಾರ,ವಿಠ್ಠಲ ಕರಾಳೆ,
ಶಿವಶಂಕರ ಬಾಭಳಗಾಂವ,ಜಗನ್ನಾಥ ಕೋಟೆ, ಎಂ.ಎಸ್.ಮುಜಗೊಂಡ ಮತ್ತಿತರಿದ್ದರು.
540 ಜನರಿಗೆ ಉಚಿತ ನೇತ್ರ ತಪಾಸಣೆ ಮತ್ತು 140
ಜನರಿಗೆ ವಿಜಯಪುರದಲ್ಲಿ ನೇತ್ರ ಚಿಕಿತ್ಸೆ ವಿಜಯಪುರ ಪ್ರಭುಗೌಡ ಪಾಟೀಲರ ಅನುಗ್ರಹ ಆಸ್ಪತ್ರೆಗೆ ಕಳುಹಿಸಲಾಯಿತು. 54 ಜನರು ರಕ್ತದಾನ ಮಾಡಿದರು.