ಲಿಂ. ಶ್ರೀ ಸಿದ್ಧಲಿಂಗ ಮಹಾರಾಜರ ಪುಣ್ಯಾರಾಧನೆ.
ಲಚ್ಯಾಣ ಸಿದ್ಧಲಿಂಗ ಮಹಾರಾಜರ ಪುಣ್ಯಾರಾಧನೆ..! ಯವಾಗ.? ಯಾರೆಲ್ಲಾ ಪಾಲ್ಗೊಳ್ಳುತ್ತಾರೆ ಗೊತ್ತಾ..?
ಇಂಡಿ: ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂ. ಶ್ರೀ ಸಿದ್ದಲಿಂಗ ಮಹಾರಾಜರ 96ನೇ ಪುಣ್ಯಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕøತಿಕ
ಕಾರ್ಯಕ್ರಮಗಳನ್ನು ಅಕ್ಟೋಬರ್ 6 ಹಾಗೂ 7 ರಂದು ಜರುಗಲಿದೆ. ಅ.6 ರಂದು ಬೆಳಿಗ್ಗೆ 4 ಗಂಟೆಗೆ ಬಂಥನಾಳದ
ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ
ಸಾನಿಧ್ಯದಲ್ಲಿ ಗುರು ಶಂಕರಲಿಂಗ ಮಹಾಶಿವ – ಯೋಗಿಗಳು, ಲಿಂ. ಶ್ರೀ ಸಂಗನಬಸವ
ಮಹಾಶಿವಯೋಗಿಗಳು, ಲಿಂ. ಶ್ರೀ ಸಿದ್ಧಲಿಂಗ
ಮಹಾರಾಜರ ಶಿಲಾ ಮೂರ್ತಿಗೆ ಭಕ್ತರಿಂದ ವಿಶೇಷ
ಅಭಿಷೇಕ, ಪೂಜೆ ನೆರವೇರಲಿದೆ.
ಸಂಜೆ 6.30 ಗಂಟೆಗೆ ಕಳೆದ ಸೆ.20 ರಿಂದ ನಿತ್ಯ
ಸಂಜೆ ಪ್ರವಚನಕಾರ ತುಂಗಳದ ಶ್ರೀ ಶಾಂಭವಿ ಸಿದ್ಧಲಿಂಗ ಆಶ್ರಮದ ಮಾತೋಶ್ರೀ ಅನುಸೂಯಾದೇವಿ ಅವರು
ನಡೆಸಿಕೊಡುತ್ತಿರುವ ಶರಣರ ದರ್ಶನ ಕುರಿತ ಪ್ರವಚನ ಕಾರ್ಯಕ್ರಮದ ಮಹಾಮಂಗಲೋತ್ಸವ ಜರುಗಲಿದೆ.
ಶಿವಮೊಗ್ಗದ ಆನಂದಪುರ ಬೆಕ್ಕಿನ ಕಲ್ಮಠ ಮುರಘರಾಜೇಂದ್ರ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಗೊಳಸಾರದ ಶ್ರೀ ಪುಂಡಲಿಂಗ ಮಹಾಸ್ವಾಮೀಜಿ, ಆಲಮೇಲದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ತಡವಲಗಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚರ್ಯರು, ಜಕನೂರಿನ ಶ್ರೀ ಸಿದ್ಧಲಿಂಗ ದೇವರು, ಅಗರಖೇಡದ ಅಭಿನವ
ಪ್ರಭುಲಿಂಗ ಮಹಾಸ್ವಾಮೀಜಿ, ಹೂವಿನ ಹಿಪ್ಪರಗಿಯ ಪತ್ರಿಮಠದ ಮಾತೋಶ್ರೀ ದ್ರಾಕ್ಷಾಯಿಣಿ ಅಮ್ಮನವರು
ಸಾನಿಧ್ಯವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸ್ಥಳಿಯ ಗಂಗಾಬಾಯಿ
ನಿಂಗಪ್ಪ ಕರಾಳೆ ಮನೆತನದವರಿಂದ ಬಂಥನಾಳ ಪೂಜ್ಯರಿಗೆ ತುಲಾಭಾರ ಸೇವೆ ನೆರವೆರಲಿದೆ.
ಬಳಿಕ ಭಕ್ತರು ಮಡಿಬಟ್ಟೆ ತೊಟ್ಟು ಇಡೀ ರಾತ್ರಿ
ಮಡಿಭಜನೆ ನಡೆಸಲಿದ್ದಾರೆ. ಅ.7 ರಂದು ಬೆಳಿಗ್ಗೆ ಬೆಳಿಗ್ಗೆ 10 ಗಂಟೆಗೆ ಸೋಲಾಪುರದ ಬಸವರಾಜ ಸಿದ್ರಾಮಪ್ಪ
ಕರಜಗಿಕರ ದಂಪತಿಗಳಿಂದ ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಪಾದಪೂಜಾ
ಕಾರ್ಯಕ್ರಮ ಜರುಗಲಿದೆ. ಸಂಜೆ 5 ಗಂಟೆಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬಂಥನಾಳದ ಲಿಂ. ಶ್ರೀ ಸಂಗನಸವ
ಮಹಾಶಿವಯೋಗಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.