ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!ರಕ್ಷಣಾ ಕಾರ್ಯ ನಡೆದಿದೆ..
ವಿಜಯಪುರ: ಬೃಹತ್ ಗೋದಾಮಿನಲ್ಲಿ ಚೀಲಗಳು ಪಲ್ಟಿಯಾಗಿರುವ ಪರಿಣಾಮ ಅಡಿಯಲ್ಲಿ 5ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿರುವ ಘಟನೆ ವಿಜಯಪುರ ನಗರದ ರಾಜಗುರು ಫುಡ್ಸ್ ಗೋದಾಮಿನಲ್ಲಿ ನಡೆದಿದೆ. ನಗರದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಗೋದಾಮಿನಲ್ಲಿ ನೂರಾರು ಚೀಲಗಳ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಸ್ಥಳದಲ್ಲಿ ರಕ್ಷಾಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.