ಕುವೆಂಪು ಮಾನವ ಸಮಾನತೆಯ ಹರಿಕಾರ
ಇಂಡಿ: ಓ ನನ್ನ ಚೇತನ ಆಗು ನೀ ಅನಿಕೇತನ ಎಂದು ವಿಶ್ವ ಮಾನವ ಸಂದೇಶ ನೀಡಿದ ಕುವೆಂಪು ಒಂದು ಧೀಮಂತ ಚೇತನ. ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಕೃತಿ ಸಾಧ್ಯತೆಗಳನ್ನು ಸಮೃದ್ಧವಾಗಿ ನೀಡಿದ ಕುವೆಂಪು
ಮಾನವ ಸಮಾನತೆಯ ಹರಿಕಾರರಾಗಿದ್ದರು ಎಂದು
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು
ಆಡಳಿತ ವತಿಯಿಂದ ನಡೆದ ಕುವೆಂದು ಜನ್ಮ ದಿನದ
ಸಮಾರಂಭದಲ್ಲಿ ಅವರು ಮಾತನಾಡಿದರು.
ಬದುಕಿನ ಸಣ್ಣ ಸಂಗತಿಗಳು ಚಿಲ್ಲರೆ ಮನಸುಗಳು
ಅವರೆನ್ನಂದೂ ಬಾಧಿಸಲಿಲ್ಲ. ಕಡೆಗಣಿಸಲ್ಪಟ್ಟವರಿಗೆ
ಉತ್ತಮ ಸ್ಥಾನವನ್ನು ನೀಡಿ ನೋವುಂಡ ಪಾತ್ರಗಳಿಗೆ
ದನಿಯಾಗಿ ನಿಂತರು ಎಂದರು.
ಗ್ರೇಡ್ 2 ತಹಸೀಲ್ದಾರ ಧನಪಾಲಶೆಟ್ಟಿ, ಬಸವರಾಜ
ರಾಹೂರ, ಎಸ್.ಆರ್. ಮುಜಗೊಂಡ, ಎಡಿಎಲ್‍ಆರ್ ಕಾಂಬಳೆ, ಎಂ.ಪಿ. ಕೊಡತೆ, ಲಲಿತಾ ಬಗಲಿ ಮತ್ತಿತರಿದ್ದರು.
ಇಂಡಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕುವೆಂದು ಜನ್ಮ ದಿನದ
ಸಮಾರಂಭದಲ್ಲಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.