ವಿಜಯಪುರ : ಹರಿತವಾದ ಆಯುಧದಿಂದ ಪತ್ನಿಯನ್ನು ಪತಿ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ನಡೆದಿದೆ. ಶೀಲವಂತಿ ಗುರುಬಾಳ ಕನ್ನಾಳ ಕೊಲೆಯಾದ ಪತ್ನಿ. ಇನ್ನು ಪತಿ ಗುರುಬಾಳ ತಿಪ್ಪಣ್ಣ ಕನ್ನಾಳನಿಂದ ಕೃತ್ಯ ನಡೆದಿದೆ. ಚಡಚಣ ತಾಲೂಕಿನ ಧುಮಕನಾಳದ ಗುರುಬಾಳನಿಗೆ ೫ ವರ್ಷದ ಹಿಂದೆ ಚಾಂದಕವಠೆಯ ಶೀಲವಂತಿಯೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು. ಗಂಡನ ಕುಡಿತದ ಕಾರಣ ಸಂಸಾರದಲ್ಲಿ ಬಿರುಕು ಉಂಟಾಗಿತ್ತು. ಇನ್ನು
ಹೆಂಡತಿಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ಗುರುಬಾಳನಿಗೆ ಕುಡಿತ ಬಿಟ್ಟರೆ ಮನೆಗೆ ಬರುವೆ ಎಂದು ಪತ್ನಿ ಹೇಳಿದ್ದಳು ಎನ್ನಲಾಗಿದೆ. ಅದಕ್ಕಾಗಿ ಪತ್ನಿಯನ್ನು ಕೊಲೆ ಮಾಡಿ ಗಂಡ ಗುರುಬಾಳ ಪರಾರಿಯಾಗಿದ್ದಾನೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.