ಇಂಡಿಯಲ್ಲಿ ಕೆ.ಆರ್.ಎಸ್ ಪಕ್ಷಕ್ಕೆ ಬಾರಿ ಬೆಂಬಲ..
ಎಮ್ ಎಲ್ ಎ ಅಭ್ಯರ್ಥಿ ಅಶೋಕ ಜಾಧವ
ಇಂಡಿ: ಭ್ರಷ್ಟಾಚಾರ ಮುಕ್ತ ಜನಪರ ಆಡಳಿತ ನೀಡುವುದೇ ಕೆ ಆರ್ ಎಸ್ ಪಕ್ಷದ ಮುಖ್ಯ ಉದ್ದೇಶ ಎಂದು ಇಂಡಿ ವಿಧಾನ ಸಭಾ ಮತಕ್ಷೇತ್ರದ ಅಭ್ಯರ್ಥಿ ಅಶೋಕ ಜಾಧವ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್)ದ ವತಿಯಿಂದ ಪಕ್ಷದ ಪ್ರಚಾರ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಹಮ್ಮಿಕೊಳ್ಳಲಾಗಿದ್ದು ಪ್ರತಿ ಹಳ್ಳಿಯಲ್ಲೂ ಬಾರಿ ಬೆಂಬಲ ವ್ಯಕ್ತ ವಾಗಿದೆ.
ಕೆ.ಆರ್.ಎಸ್ ಪಕ್ಷದವರು ಗ್ರಾಮಗಳಿಗೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪ್ರೀತಿಯಿಂದ ಬರಮಾಡಿಕೊಂಡು, ಪಕ್ಷದ ಪರವಾಗಿ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ಇನ್ನೂ ಸ್ವಯಂ ಪ್ರೇರಿತವಾಗಿ ಪಕ್ಷಕ್ಕೆ ಸೇರುತ್ತೇವೆ ಎಂದು ಸುಮಾರು ಯುವಕರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.
ತಾಲೂಕಿನ ಬಬಲಾದಿ ಮತ್ತು ಹಳಗುಣಕಿ ಗ್ರಾಮಗಳು ಸೇರಿ ಅನೇಕ ಗ್ರಾಮಗಳಲ್ಲಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದು ಹೇಳಿದರು.