ಬೆಂಗಳೂರು : ಪುಟ್ಬಾಲ್ ಗುರುತಿಗೆ ಮತ, ಕರ್ನಾಟಕಕ್ಕೆ ಹಿತ ಎಂಬ ಘೋಷವಾಕ್ಯದೊಂದಿಗೆ ಪುಟ್ಬಾಲ್ ಚಿಹ್ನೆಯನ್ನು ಕೆ ಆರ್ ಪಿ ಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ದನ ರೆಡ್ಡಿ ಬಿಡುಗಡೆಗೊಳಿಸಿದ್ದಾರೆ. ಬಿಸಲಿನಂತೆ ರಾಜ್ಯ ರಾಜಕಾರಣದಲ್ಲಿ ಚುನಾವಣೆ ರಂಗೇರುತ್ತಿದೆ. ಈಗಾಗಲೇ ಎಲ್ಲಾ ಪಕ್ಷಗಳು ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಿವೆ. ಹಾಲಿ, ಮಾಜಿ ಜೊತೆಗೆ ಹೊಸ ಹೊಸ ಅಭ್ಯರ್ಥಿಗಳು ಚುನಾವಣೆ ಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ನಿರಂತರ ಓಡಾಟ ನಡೆಸುತ್ತಿದ್ದಾರೆ. ಇದರೆಲ್ಲರ ಮದ್ಯ ನಡುವೆ ಉತ್ತರ ಕರ್ನಾಟಕದಲ್ಲಿ ಹೊಸ ಸಂಚಲನ ಕುತೂಹಲ ಮೂಡಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಚುನಾವಣೆ ಆಯೋಗದಿಂದ ಪುಟ್ಬಾಲ್ ಚಿಹ್ನೆ ಲಭಿಸಿದೆ. ತಮ್ಮ ಪಕ್ಷಕ್ಕೆ ದೊರೆತಿರುವ ಚಿಹ್ನೆಯನ್ನು ಬಿಡುಗಡೆ ಗೊಳಿಸಿ ಜನಾರ್ದನ ರೆಡ್ಡಿ ಮಾತಾನಾಡಿದರು.
ಇಲ್ಲಿಯವರೆಗೆ ಉತ್ತರ ಕರ್ನಾಟಕ ಅಭಿವೃದ್ಧಿ ಕಾಣಲಿಲ್ಲ. ಹಾಗಾಗಿ ಈ ಬಾರಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬದಲಾವಣೆ ತರುವ ಪ್ರಯತ್ನ ಮಾಡಲಾಗುವುದು. ಈಗಾಗಲೇ ಉತ್ತರ ಕರ್ನಾಟಕದ ಹಲವು ಕಡೆ ಪ್ರಚಾರ ಮಾಡಿದ್ದೆನೆ. ಜನರು ತುಂಬಾ ಬೆಂಬಲ ಮತ್ತು ವಿಸ್ವಾಸ ವ್ಯಕ್ತ ಪಡಿಸಿದ್ದಾರೆ. ಚುನಾವಣೆಯಲ್ಲಿ 50 ಕ್ಷೇತ್ರ ಕ್ಕಿಂತಲೂ ಹೆಚ್ಚಿನ ಕ್ಷೇತ್ರದಲ್ಲಿ ಸ್ಪರ್ದೆ ಮಾಡುತ್ತವೆ. 30 ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಗೆಲ್ಲತ್ತೆವೆ ಎಂದು ಹೇಳಿದರು.