ವಿಜಯಪುರ : ಕೌನ್ ಬನೇಗಾ ಕರೋಡ್‌ಪತಿ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ನಗದು ವಂಚನೆ ಮಾಡಿರುವ ಘಟನೆ ವಿಜಯಪುರ ನಗರದ ಶ್ರೀನಗರ ಕಾಲೋನಿಯಲ್ಲಿ ನಡೆದಿದೆ. ಶ್ರೀನಗರ ಕಾಲೋನಿಯ ನಿವಾಸಿ ರೇಣುಕಾ ಬಿರಾದಾರ ಮೋಸ ಹೋಗಿರುವ ಮಹಿಳೆ. ಇನ್ನು KBC ನಲ್ಲಿ ನೀವು 25 ಲಕ್ಷ ಲಕ್ಕಿ ಡ್ರಾ ವಿನ್ ಆಗಿದ್ದಿರಿ. ಅದಕ್ಕಾಗಿ ನೀವು 12 ಸಾವಿರ ಮುಂಗಡ ಪಾವತಿ ಮಾಡಬೇಕು ಎಂದಿದ್ದಾರೆ. ಇದನ್ನು ನಂಬಿ 12 ಸಾವಿರ, 30 ಸಾವಿರ ಹೀಗೆ ಒಟ್ಟು 1.15 ಲಕ್ಷ ವಂಚನೆ ಮಾಡಿದ್ದಾರೆ. ಇನ್ನು 8582038738 ನಂಬರನಿಂದ ಮೋಸ ಮಾಡಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ