ಕಾನಿಪ ಧ್ವನಿ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಪವನ ಕೊಡಹೊನ್ನ ಆಯ್ಕೆ…
ವಿಜಯಪುರ: ಇವತ್ತು ಅತೀ ಹೆಚ್ಚಾಗಿ ಪತ್ರಕರ್ತರ ಹೆಸರಲ್ಲಿ ಅನೇಕ ಬೇಡವಾದ ಕೆಲಸಗಳು ನಡೆಯುತ್ತಿವೆ. ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಅರಿತು ಸಮಾಜಿಕವಾಗಿ ಬಳಲಿದ ವ್ಯಕ್ತಿಗಳಿಗೆ ದ್ವನಿಯಾಗಿ ನಿಲ್ಲಬೇಕು. ಹೊರತು ಕೆಟ್ಟ ಕಾರ್ಯಗಳಿಗೆ ಮನಸ್ಸು ಸೋಲಬಾರದು ಎಂದು ಜಿಲ್ಲಾ ಕಾನಿಪ ಧ್ಚನಿ ಸಂಘದ ಅಧ್ಯಕ್ಷ ಯೂಸುಫ್ ನೇವಾರ ಹೇಳಿದರು.
ಹೌದು ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರನ್ನಾಗಿ ಪವನ ಕೊಡಹೊನ್ನ ಆಯ್ಕೆ ಮಾಡಿ ಮಾತಾನಾಡಿದರು. ಜೊತೆಗೆ ಪ್ರಧಾನ ಕಾರ್ಯದರ್ಶಿ ಶಿವರಾಜಕುಮಾರ್ ವಾಲಿಕಾರ ಆದೇಶ ಪ್ರತಿ ನೀಡಿ ಆಯ್ಕೆ ಮಾಡಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡುರ, ಉಪಾಧ್ಯಕ್ಷ ಇರ್ಫಾನ್ ಬೀಳಗಿ, ಸಾಯಬಣ್ಣ ಹಳ್ಳಿ, ಸಂತೋಷ ಹೊಸಮನಿ, ಅಶೋಕ ನಯ್ಕೊಡಿ, ಎಸ್ ಎಮ ಬಿರಾದಾರ ಉಪಸ್ಥಿತರಿದ್ದರು.