ಕಾನೂನಿನ ಜ್ಞಾನ ಅರಿಯುವುದು ಮುಖ್ಯ : ನ್ಯಾಯಮೂರ್ತಿ ಕಾಂಬಳೆ
ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
ಇಂಡಿ : ಭವ್ಯ ಭಾರತದ ಭವಿಷತ್ತಿನ ಸೃಷ್ಟಿಕರ್ತರು ನಾವೇ ಕಾನೂನುಗಳ ಪರಿಮಿತಿಯಲ್ಲಿ ಹಕ್ಕುಗಳನ್ನು ಅನುಭವಿಸಬೇಕು ಈ ಬಗ್ಗೆ ಜ್ಞಾನವನ್ನು ಅರಿಯಬೇಕು ಎಂದು ಹಿರಿಯ ದಿವಾಣ ನ್ಯಾಯಾದೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಕೋಟೆಪ್ಪ ಕಾಂಬಳೆ ಹೇಳಿದರು.
ಪಟ್ಟಣದ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತç ವಿಭಾಗ ಮತ್ತು ಎನ್ನೆಸ್ಸೆಸ್ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಅಂತರಾಷ್ತಿçÃಯ ಮಾನವ ಹಕ್ಕುಗಳ ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕಿರಿಯ ನ್ಯಾಯಾದೀಶ ಸುನೀಲಕುಮಾರ ಎಂ.ಎಸ್ ಮಾತನಾಡಿ ಸಂವಿಧಾನದಲ್ಲಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದರು, ಉಪನ್ಯಾಸ ನೀಡಿದ ವಿ.ಎಸ್.ಹಂಜಗಿ ‘ವಿಶ್ವದಲ್ಲಿ ಕ್ರಾಂತಿಗಳ ಮೂಲಕ ಹಕ್ಕುಗಳನ್ನು ಪಡೆದು ಪ್ರತಿಯೊಬ್ಬರು ಆತ್ಮಗೌರವದಿಂದ ಬದುಕಲು ಹಕ್ಕುಗಳು ಅವಶ್ಯಕ ಎಂದರು.
ಅಧ್ಯಕ್ಷೆತಯನ್ನು ಪ್ರಾಚಾರ್ಯ ಪ್ರೊ.ಆರ್.ಎಚ್. ರಮೇಶ, ಪ್ರಾಸ್ತಾವಿಕವಾಗಿ ರಾಜ್ಯಶಾಸ್ತçದ ಮುಖ್ಯಸ್ಥ ಪ್ರೊ. ರವಿಕುಮಾರ ಅರಳಿ , ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಪಿ.ಎಸ್.ದೇವರ ಪ್ರೊ. ನಂದಕುಮಾರ ಬಿರಾದಾರ ಮಾತನಾಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಅಶೋಕ ಗಜಾಕೋಶ, ಎನ್.ಕೆ.ನಾಡಪುರೋಹಿತ ವೇದಿಕೆಯಲ್ಲಿದ್ದರು.
ಇಂಡಿ ಪಟ್ಟಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಿರಿಯ ದಿವಾಣ ನ್ಯಾಯಾದೀಶ ಕೋಟೆಪ್ಪ ಕಾಂಬಳೆ ಉದ್ಘಾಟಿಸಿ ಮಾತನಾಡಿದರು.