ಜ್ಞಾನ ಭಾರತಿಯಲ್ಲಿ ಶೈಕ್ಷಣಿಕ ಸಹಮಿಲನ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಜು.19 ಶನಿವಾರದಂದು ವಿದ್ಯಾ ಭಾರತಿ ಕರ್ನಾಟಕ ವಿಜಯಪುರ ಜಿಲ್ಲಾ ಸಂಕುಲಗಳ ಶಾಲೆಗಳ 2025-26ನೇ ಸಾಲಿನ ಶೈಕ್ಷಣಿಕ ಸಹಮಿಲನ ನಡೆಯಲಿದೆ.
ಮುಂ.10.25ಕ್ಕೆ ಕರ್ನಾಟಕ ಸರಕಾರ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರರವರು ಉದ್ಘಾಟನೆ ಮಾಡಲಿದ್ದು , ಪಂಚ ಪರಿವರ್ತನೆ ಎನ್ನುವ ವಿಷಯದ ಮೇಲೆ ರಾಷ್ಟ್ಟೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ನಾಗೇಶ ಚಿನ್ನಾರೆಡ್ಡಿಯವರು ಉಪನ್ಯಾಸ ನೀಡಲಿದ್ದಾರೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಸ್.ಸಾವಳಗಿ, ವಿದ್ಯಾ ಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ, ಜ್ಞಾನ ಭಾರತಿ ವಿದ್ಯಾ ಮಂದಿರ ವಿದ್ಯಾ ಸಂಸ್ಥೆಯ ಅಧಕ್ಷರಾದ ಬಿ.ಪಿ.ಕುಲಕರ್ಣಿ ಮುಖ್ಯ ಅತಿಥಿಸ್ಥಾನ ವಹಿಸಲಿದ್ದು, ವಿದ್ಯಾ ಭಾರತಿ ಜಿಲ್ಲಾ ಅಧ್ಯಕ್ಷ ಪ್ರಭು ಎಸ್.ಕಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ಸಮಾರೋಪ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಅರುಣ ಶಹಾಪುರ, ವಿದ್ಯಾ ಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ, ಬೆಳಗಾವಿ ವಿಭಾಗ ಪ್ರಮುಖ ರಾಜಶೇಖರ ಉಮರಾಣಿ, ಸಂಯೋಜಕ ಚಂದ್ರಶೇಖರ ಕವಟಗಿ, ಜಿಲ್ಲಾ ಕಾರ್ಯದರ್ಶಿ ರಾಜಶೇಖರ ಪಾಟೀಲ, ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಲಿದ್ದು ವಿದ್ಯಾ ಭಾರತಿ ಜಿಲ್ಲಾ ಅಧ್ಯಕ್ಷ ಪ್ರಭು ಎಸ್.ಕಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯಾ ಭಾರತಿ ಸಂಘಟನೆಗೆ ಒಳಪಟ್ಟ ಸುಮಾರು 31 ಶಾಲೆಗಳಿಂದ ಆಡಳಿತ ವರ್ಗ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರೆಲ್ಲರು ಸಹಮಿಲನದ ಅಪೇಕ್ಷಿತರಿದ್ದು 350ಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಶೈಕ್ಷಣಿಕ ಸಂಸ್ಥೆಗಳ ಬಲವರ್ಧನೆ ಹಾಗೂ ಸಂಸ್ಕಾರ ಭರಿತ ಗುಣಾತ್ಮಕ ಶಿಕ್ಷಣದ ಮೇಲೆ 3 ಅವಧಿಗಳ ಚಿಂತನ ಮಂಥನ ಮತ್ತು ಕಳೆದ ವರ್ಷ ಸಾಗಿಬಂದ ದಾರಿಗಳ ಮೇಲೆ ಅವಲೋಕನ ನಡೆಯಲಿದೆ ಎಂದು ಜಿಲ್ಲಾ ವಿದ್ಯಾ ಭಾರತಿ ಪ್ರಚಾರ ಸಮಿತಿಯ ಸಂಚಾಲಕರಾದ ಜ್ಞಾನ ಭಾರತಿ ಪ್ರೌಢ ಶಾಲೆಯ ಮುಖ್ಯಗುರು ರಾಮಚಂದ್ರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.