ಕರೂನಾ ಮುಕ್ತ ಮಾಡಲು ವೈದ್ಯಕೀಯ ಸಿಬ್ಬಂದಿಯ ಪಾತ್ರ ಮುಖ್ಯ : ರಮೇಶ ಧರೆನವರ.
ಇಂಡಿ : ಎಸ್ ಸಿ ಮೋರ್ಚಾ ವತಿಯಿಂದ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಸೇವಾ ಪಾಕ್ಷಿಕ್ ಕಾರ್ಯಕ್ರಮದ ಅಂಗವಾಗಿ, ಅಕ್ಟೊಬರ್ ೨ ಮಹಾತ್ಮಾ ಗಾಂಧಿಜಯಂತಿ ಕಾರ್ಯಕ್ರಮ ಪ್ರಯುಕ್ತ ಕ್ಷಯ ರೋಗ ನಿರ್ಮೂಲನ ಅಭಿಯಾನ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಎಸ್ ಸಿ ಮೋರ್ಚಾ ಅಧ್ಯಕ್ಷ ಶ್ರೀ ರಮೇಶ್ ಧರೆನವರ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರ ಹುಟ್ಟುಹಬ್ಬದ ನಿಮಿತ್ಯ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 2 ಗಾಂಧಿ ಜಯಂತಿಯಂತಿ ಆಚರಿಸುತ್ತಿದ್ದು, ನರೇಂದ್ರ ಮೋದಿಜಿ ಅವರು ದೇಶದ ಜನರಿಗೆ ಉಚಿತ ಲಸಿಕೆ ಕೊಡುವುದು ಉಚಿತ ಪಡಿತರ ಆಹಾರಧಾನ್ಯ ವಿತರಿಸುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕರೂನಾ ಮುಕ್ತ ದೇಶ ಮಾಡಲು ಪಣತೊಟ್ಟರು ಕರೂನಾ ಮುಕ್ತ ಮಾಡಲು ದೇಶದ ಸಮಸ್ತ ವೈದ್ಯಕೀಯ ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಪೌರಕಾರ್ಮಿಕರು ಹೀಗೆ ಎಲ್ಲರ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕಿವಡೆ, ಸಿದ್ದಲಿಂಗ ಹಂಜಗಿ, ಅನಿಲ್ ಜಮಾದಾರ್, ಕಾಸು ಗೌಡ ಬಿರಾದಾರ ,ಶೀಲವಂತ ಉಮರಾಣಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿನೋದ ಚವಾಣ ಅವರು ಕ್ಷಯ ರೋಗಿಗಳಿಗೆ 6ತಿಂಗಳ ದತ್ತು ಸ್ವೀಕರಿಸಿ ಅವರ ಖರ್ಚು ನೋಡಿಕೊಳ್ಳುತ್ತೇವೆ ಎಂದರು. ಡಾಕ್ಟರ್ ರಾಜೇಶ ಕೊಳೇಕರ್, ಡಾಕ್ಟರ್ ಪ್ರಶಾಂತ ಧೂಮಗೊಂಡ, ವಿಜಯಲಕ್ಷ್ಮಿ ರೂಗಿಮಠ, ಅನುಸೂಯ ಮದರಿ, ಅಣ್ಣು ಮದರಿ, ರಾಜಶೇಖರ್ ಯರಗಲ್, ಅಜಿತ್ ಲಾಳಸಂಗಿ, ರಾಚು ಬಡಿಗೇರ್, ಸಚಿನ್ ಬೊಳೆಗಾವ್, ಜಟ್ಟು ಮರಡಿ, ಶ್ರೀಮಂತ ಮೊಘಲಾಯಿ, ಶಿವಯೋಗಿ ರೂಗಿಮಠ, ಧರ್ಮರಾಯ ಮದುರಖಂಡಿ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.